ಬೆಂಗಳೂರು, ಜ. 13 (DaijiworldNews/AA): ನಾಯಕತ್ವದ ಬಗ್ಗೆ ಇರೋ ಗೊಂದಲವನ್ನ ರಾಹುಲ್ ಗಾಂಧಿ ಇತ್ಯರ್ಥ ಮಾಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಸಿಎಂ-ಡಿಸಿಎಂ ರಿಂದ ರಾಹುಲ್ ಭೇಟಿ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, "ರಾಹುಲ್ ಗಾಂಧಿ ಭೇಟಿ ಮಾಡಿರುವ ಸಿಎಂ-ಡಿಸಿಎಂ ಭೇಟಿಯ ಸಂದರ್ಭದಲ್ಲಿ ಪರಿಹಾರ ಸಿಗಬೇಕು. ನಾಯಕತ್ವ ಬದಲಾವಣೆ ವಿಚಾರದಲ್ಲಿ ಎದ್ದಿರುವ ಚರ್ಚೆಗೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು. ರಾಹುಲ್ ಗಾಂಧಿ ಭೇಟಿ ಮಾಡಿದ ಸಂದರ್ಭದಲ್ಲಿ ಇದಕ್ಕೆ ಉತ್ತರ ಸಿಗುವ ನಿರೀಕ್ಷೆ ಇದೆ. ಗೊಂದಲ ಪರಿಹಾರ ಮಾಡದಿದ್ದರೆ ಆಡಳಿತದ ಮೇಲೆ ಪರಿಣಾಮ ಆಗಲಿದೆ. ಅನಗತ್ಯವಾಗಿರುವ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತದೆ. ಪರ ವಿರೋಧ ಅಭಿಪ್ರಾಯಗಳು ಕೂಡ ಬರಲಿದೆ. ಇದಕ್ಕೆ ಬ್ರೇಕ್ ಹಾಕುವ ಕೆಲಸವನ್ನು ಹೈಕಮಾಂಡ್ ಮಾಡಬೇಕು" ಎಂದು ತಿಳಿಸಿದರು.
"ಈ ಹಿಂದೆಯೇ ನಾನು ಇದನ್ನು ಒತ್ತಾಯ ಮಾಡಿದ್ದೆ. ಈಗಲೂ ಹೈಕಮಾಂಡ್ಗೆ ಒತ್ತಾಯ ಮಾಡುತ್ತೇನೆ. ಗೊಂದಲ ಪರಿಹಾರ ಆಗದಿದ್ದರೆ ಶಾಸಕರಲ್ಲಿ ಗೊಂದಲ ಇರುತ್ತದೆ. ಯಾರ್ ಸಿಎಂ ಆಗ್ತಾರೆ? ನಮ್ಮದೇನು ಅಂತ ಗೊಂದಲ ಇರುತ್ತದೆ. ಜೊತೆಗೆ ಬೆಂಗಳೂರು ಚುನಾವಣೆ ನಡೆಸುವ ಬಗ್ಗೆ ತೀರ್ಮಾನ ಆಗಬೇಕಿದೆ. ಕಾರ್ಪೊರೇಷನ್ ಚುನಾವಣೆ ಜೊತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಆಗಬೇಕು. ಸ್ಥಳೀಯ ಸಂಸ್ಥೆ ಚುನಾವಣೆ ಆಗದಿದ್ದರೆ, ಕೇಂದ್ರದಿಂದ ಬರುವ ಅನುದಾನಕ್ಕೆ ತೊಂದರೆಯಾಗಲಿದೆ" ಎಂದರು.