ಚೆನ್ನೈ, ಜ. 15 (DaijiworldNews/AA): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗುವುದು ಕಷ್ಟಸಾಧ್ಯ. ತನ್ನ ಕಠಿಣ ಪರಿಶ್ರಮ, ಛಲದಿಂದ ಯುಪಿಎಸ್ಸಿಯಲ್ಲಿ ಉತ್ತೀರ್ಣರಾದ ಪವಿತ್ರಾ ಪಿ ಅವರ ಯಶೋಗಾಥೆಯು ಅನೇಕ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದೆ.

ತಮಿಳುನಾಡು ಮೂಲದ ಪವಿತ್ರಾ ಅವರು ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಕುಟುಂಬದಿಂದ ಬಂದವರು. ಅವರ ಪೋಷಕರಿಬ್ಬರೂ ಸರ್ಕಾರಿ ನೌಕರರಾಗಿದ್ದಾರೆ. 2022ರಲ್ಲಿ ಗಿಂಡಿಯ ಇಂಜಿನಿಯರಿಂಗ್ ಕಾಲೇಜಿನಿಂದ ಮಾಹಿತಿ ತಂತ್ರಜ್ಞಾನದಲ್ಲಿ ಬಿ.ಟೆಕ್ ಪದವಿ ಪೂರೈಸಿದ ನಂತರ ಅವರು ಯುಪಿಎಸ್ಸಿ ಪಯಣ ಆರಂಭಿಸಿದರು.
ಪವಿತ್ರಾ ಅವರ ಯಶಸ್ಸಿನ ಹಾದಿಯು ಪರಿಶ್ರಮದಿಂದ ಕೂಡಿದೆ. ತಮ್ಮ ಪದವಿ ಶಿಕ್ಷಣದ ಅಂತಿಮ ವರ್ಷದಲ್ಲಿಯೇ ಅವರು ಯುಪಿಎಸ್ಸಿ ಸಿದ್ಧತೆಯನ್ನು ಪ್ರಾರಂಭಿಸಿದ್ದರು. ಮೊದಲ ಹಾಗೂ ಎರಡನೇ ಪ್ರಯತ್ನದಲ್ಲಿ ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗಲು ವಿಫಲರಾದರು. ಆದರೆ ಅವರು ಎದೆಗುಂದದೆ ಪ್ರತಿ ಹಿನ್ನಡೆಯಿಂದಲೂ ಹೊಸ ಪಾಠ ಕಲಿತು ಮತ್ತಷ್ಟು ಸುಧಾರಿಸಿಕೊಂಡರು.
2024ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ಪವಿತ್ರಾ ಪಿ ಅವರು 42ನೇ ಅಖಿಲ ಭಾರತ ರ್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಈ ಮೂಲಕ ಲಕ್ಷಾಂತರ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಮಾದರಿಯಾಗಿದ್ದಾರೆ.