ನವದೆಹಲಿ, ಫೆ. 27 (DaijiworldNews/AK): ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿ 23 ಜನರನ್ನು ಖುಲಾಸೆಗೊಳಿಸಿ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೇಂದ್ರ ತನಿಖಾ ದಳ (ಸಿಬಿಐ) ದೆಹಲಿ ಹೈಕೋರ್ಟ್ನಲ್ಲಿ ತುರ್ತು ಮೇಲ್ಮನವಿ ಸಲ್ಲಿಸಿದೆ.

ಸಿಬಿಐ ಮತ್ತೆ ಮೇಲ್ಮನವಿ ಸಲ್ಲಿಸಿದ್ದು, ಕೇಜ್ರಿವಾಲ್ಅವರ ಖುಲಾಸೆಯನ್ನು ರದ್ದುಗೊಳಿಸಲು ಮನವಿ ಮಾಡಿದೆ. ದೆಹಲಿ ರೌಸ್ ಅವೆನ್ಯೂ ನ್ಯಾಯಾಲಯವು ಆರೋಪಪಟ್ಟಿಯನ್ನು ತಿರಸ್ಕರಿಸಿ, ಪ್ರಮುಖ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಆಮ್ ಆದ್ಮಿ ಪಕ್ಷ ಈ ತೀರ್ಪನ್ನು ಸತ್ಯದ ಐತಿಹಾಸಿಕ ವಿಜಯವೆಂದು ಬಣ್ಣಿಸಿತ್ತು.
ಆಮ್ ಆದ್ಮಿ ಪಕ್ಷದ ನಾಯಕರು “ಸತ್ಯಮೇವ ಜಯತೇ” ಎಂದು ಕರೆದು ಸಂಭ್ರಮಿಸಿದ್ದರು. ಆದರೆ, ಇದೀಗ ಸಿಬಿಐ ದೆಹಲಿ ಹೈಕೋರ್ಟ್ ಮೊರೆಹೋಗಿದೆ. ಆರೋಪಿಗಳು ಫೋನ್ಗಳು ಮತ್ತು ಸಿಮ್ಗಳನ್ನು ನಾಶಪಡಿಸಿದ್ದಾರೆ ಎಂಬ ಆರೋಪವನ್ನೂ ಸಿಬಿಐ ಮಾಡಿದೆ.