ಮುಂಬೈ, ಮಾ. 29 (DaijiworldNews/AA): ರೇಮಂಡ್ ಗ್ರೂಪ್ನ ಮಾಜಿ ಛೇರ್ಮನ್, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ವಿಜಯ್ಪತ್ ಸಿಂಘಾನಿಯಾ (87) ಶನಿವಾರ ಸಂಜೆ ವಿಧಿವಶರಾಗಿದ್ದಾರೆ.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ವಿಜಯ್ಪತ್ ಸಿಂಘಾನಿಯಾ ಅವರು ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರು ರೇಮಂಡ್ ಗ್ರೂಪ್ ಕಟ್ಟಿ ಬೆಳೆಸಿದ್ದ ಮತ್ತು ಅದರ ಮಾಜಿ ಛೇರ್ಮನ್ ಆಗಿದ್ದರು.
ತಮ್ಮ ತಂದೆ ಮೃತಪಟ್ಟಿರುವ ವಿಚಾರವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಗೌತಮ್ ಸಿಂಘಾನಿಯಾ ಅವರು, ಮುಂಬೈನ ಚಂದನವಾಡಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿಸಿದ್ದಾರೆ.
ವಿಜಯ್ಪತ್ ಸಿಂಘಾನಿಯಾ ಅವರು 1980ರಿಂದ 2000ರವರೆಗೆ ಸುಮಾರು ಎರಡು ದಶಕಗಳ ಕಾಲ ರೇಮೆಂಡ್ ಗ್ರೂಪ್ನ ಛೇರ್ಮನ್ ಆಗಿದ್ದರು. ಬಳಿಕ ಕಂಪನಿಯ ಜವಾಬ್ದಾಯನ್ನ ಪುತ್ರ ಗೌತಮ್ ಸಿಂಘಾನಿಯಾ ಅವರಿಗೆ ವಹಿಸಿ, ಸಂಸ್ಥೆಯಲ್ಲಿದ್ದ ತಮ್ಮ ಸಂಪೂರ್ಣ ಶೇ.37 ರಷ್ಟು ಪಾಲನ್ನು ಅವರಿಗೆ ಹಸ್ತಾಂತರಿಸಿದರು.
ಇನ್ನು ಸಿಂಘಾನಿಯಾ ಅವರು ರೇಮೆಂಡ್ಸ್ ಅನ್ನು ಟೆಕ್ಸ್ಟೈಲ್ ಕ್ಷೇತ್ರಕ್ಕೆ ಸೀಮಿತಗೊಳಿಸದೇ, ಹಲವು ಸೆಕ್ಟರ್ಗಳಲ್ಲಿ ಅದರ ಬ್ಯುಸಿನೆಸ್ ವಿಸ್ತರಿಸಿದ್ದಾರೆ. ಸಿಂಥೆಟಿಕ್ ಫ್ಯಾಬ್ರಿಕ್ಸ್, ಡೆನಿಮ್, ಉಕ್ಕು, ಸಿಮೆಂಟ್, ಕೈಗಾರಿಕಾ ಉತ್ಪನ್ನ ಇತ್ಯಾದಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಇವತ್ತು ರೇಮಂಡ್ ಬ್ಯುಸಿನೆಸ್ಗಳಿವೆ.