ಬೆಂಗಳೂರು, ಮಾ. 29 (DaijiworldNews/AA): ವಿನಾಃಕಾರಣ ಜನ ಆತಂಕಕ್ಕೆ ಒಳಗಾಗೋದು ಬೇಡ ಡೊಮೆಸ್ಟಿಕ್ ಅವರಿಗೆ ನಗರದಲ್ಲಿ 25 ದಿನಕ್ಕೆ 1 ಸಿಲಿಂಡರ್ ಕೊಡ್ತಿದ್ದೀವಿ. ಹಳ್ಳಿಗಳಲ್ಲಿ 45 ದಿನಕ್ಕೆ 1 ಸಿಲಿಂಡರ್ ಕೊಡ್ತಿದ್ದೇವೆ ಎಂದು ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.

ಅಡುಗೆ ಅನೀಲ ಅಭಾವದಿಂದ ಹೋಟೆಲ್ಗಳು ಬಂದ್ ಆಗುತ್ತಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹೋಟೆಲ್ ಗಳಿಗೆ ಹೆಚ್ಚುವರಿ ಅಡುಗೆ ಅನಿಲ ನೀಡುವ ಬಗ್ಗೆ ಮಂಗಳವಾರ ಸಭೆ ನಡೆಯಲಿದೆ. 20% ಅಡುಗೆ ಅನಿಲ ಹೋಟೆಲ್ ಗೆ ಕೊಡ್ತಾ ಇದ್ದೀವಿ. ಹಾಸ್ಪಿಟಲ್ಗಳಿಗೆ 100% ಕೊಡ್ತಿದ್ದೇವೆ. ನಿನ್ನೆ ನರೇಂದ್ರ ಮೋದಿ ಹಾಗೂ ಪೆಟ್ರೋಲಿಯಂ ಸಚಿವರೊಂದಿಗೆ ಸಭೆ ಆಗಿದೆ. ಮಂಗಳವಾದಿಂದ ಇಂಪ್ಲಿಮೆಂಟ್ ಆದ್ರೆ ಹೋಟೆಲ್ಗಳಿಗೆ ಇನ್ನೂ ಕೊಡುತ್ತೇವೆ" ಎಂದರು.
"ಸಾಧ್ಯವಾದಷ್ಟು ಹೋಟೆಲ್ ಗಳಿಗೆ ಹೆಚ್ಚುವರಿ ಸಿಲಿಂಡರ್ ಕೊಡೋಕೆ ಹೇಳಿದ್ದೇವೆ. ಮಂಗಳವಾರ ಮತ್ತೊಂದು ಸುತ್ತಿನ ಸಭೆಯಿದೆ. ಆ ದಿನ ಇನ್ನೂ ಹೆಚ್ಚುವರಿ ಸಿಲಿಂಡರ್ ಕೊಡುವ ಬಗ್ಗೆ ನಿರ್ಧಾರ ಮಾಡ್ತೀವಿ. ವಿನಾಃಕಾರಣ ಜನ ಆತಂಕಕ್ಕೆ ಒಳಗಾಗೋದು ಬೇಡ ಡೊಮೆಸ್ಟಿಕ್ ಅವರಿಗೆ ನಗರದಲ್ಲಿ 25 ದಿನಕ್ಕೆ 1 ಸಿಲಿಂಡರ್ ಕೊಡ್ತಿದ್ದೀವಿ. ಹಳ್ಳಿಗಳಲ್ಲಿ 45 ದಿನಕ್ಕೆ 1 ಸಿಲಿಂಡರ್ ಕೊಡ್ತಿದ್ದೇವೆ. ವಾಣಿಜ್ಯ ಸಿಲಿಂಡರ್ ಸಮಸ್ಯೆ ಸರಿಪಡಿಸೋಕೆ ಹೇಳಿದ್ದೇವೆ. ಬಂಕ್ ಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಜಾಸ್ತಿ ಮಾಡಿರೋದ್ರ ಬಗ್ಗೆಯೂ ಚರ್ಚೆ ಮಾಡ್ತೀವೆ" ಎಂದು ಹೇಳಿದರು.