ನವದೆಹಲಿ, ಮೇ. 24 (DaijiworldNews/AA): ಭಾರತದ 140 ಕೋಟಿ ಜನರಿಗೆ ಕೈಗೆಟುಕುವ ಮತ್ತು ಸ್ಥಿರ ಇಂಧನ ಪೂರೈಕೆಯೇ ನಮ್ಮ ಆದ್ಯತೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ತಿಳಿಸಿದ್ದಾರೆ.

ಭಾನುವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜೊತೆ ನಡೆದ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆಯ ನಂತರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತ-ಅಮೆರಿಕ ಇಂಧನ ಸಹಕಾರವು ಜಾಗತಿಕ ಸವಾಲುಗಳ ಮಧ್ಯೆ ಬಲಗೊಂಡಿದೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಏರಿಳಿತಗಳ ನಡುವೆಯೂ ಉಭಯ ದೇಶಗಳ ಇಂಧನ ವ್ಯಾಪಾರದಲ್ಲಿ ಭಾರಿ ಏರಿಕೆ ಕಂಡುಬಂದಿದೆ ಎಂದರು.
'ಭಾರತ-ಅಮೆರಿಕ ಇಂಧನ ಸಹಕಾರವು ಜಾಗತಿಕ ಸವಾಲುಗಳ ಮಧ್ಯೆ ಬಲಗೊಂಡಿದೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಏರಿಳಿತಗಳ ನಡುವೆಯೂ ಉಭಯ ದೇಶಗಳ ಇಂಧನ ವ್ಯಾಪಾರದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ನಮ್ಮ ಸರ್ಕಾರದ ಪ್ರಮುಖ ಆದ್ಯತೆ ಮತ್ತು ಜವಾಬ್ದಾರಿಯೆಂದರೆ ಭಾರತದ 140 ಕೋಟಿ ಜನರಿಗೆ ಕೈಗೆಟುಕುವ ದರದಲ್ಲಿ ಹಾಗೂ ಸುಲಭವಾಗಿ ಇಂಧನ ಸಿಗುವಂತೆ ಮಾಡುವುದಾಗಿದೆ' ಎಂದು ಹೇಳಿದ ಅವರು, ಅಮೆರಿಕ ಮತ್ತು ಭಾರತದ ನಡುವಿನ ಇಂಧನ ಪಾಲುದಾರಿಕೆಯನ್ನು ಶ್ಲಾಘಿಸಿದರು.