ಬೆಂಗಳೂರು, ಜೂ. 23 (DaijiworldNews/AK): ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮಾಡಲು ಬೇಕಾದಷ್ಟು ಕೆಲಸ ಇದೆ. ಆರ್ಎಸ್ಎಸ್ ಬಗ್ಗೆ ಮಾತಾಡೋದು ಬಿಟ್ಟು ಆ ಕೆಲಸಗಳ ಕಡೆ ಗಮನ ಕೊಡಲಿ ಅಂತ ಬಿಜೆಪಿನಾಯಕ ಸಿ.ಟಿ ರವಿ ಕಿವಿಮಾತು ಹೇಳಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ಅನ್ನು ಮತ್ತೆ ಟಾರ್ಗೆಟ್ ಮಾಡ್ತಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅವರಿಗೆ ಮಾಡೋದಕ್ಕೆ ತುಂಬಾ ಕೆಲಸಗಳು ಇವೆ. ಆ ಕಡೆ ಗಮನಹರಿಸಲಿ. ಕರ್ನಾಟಕ ಡ್ರಗ್ಸ್ ಕ್ಯಾಪಿಟಲ್ ಆಗ್ತಿದೆ. ಇದರ ಕಡೆ ಗಮನಹರಿಸಲಿ ಎಂದರು.
ದೊಡ್ಡ ಪ್ರಮಾಣದಲ್ಲಿ ಬಾಂಗ್ಲಾ ಅಕ್ರಮ ವಲಸಿಗರು ಕರ್ನಾಟಕದ ಕಡೆ ಬರುತ್ತಿರುವ ಮಾಹಿತಿ ಇದೆ. ಇದು ದೇಶದ ಭದ್ರತೆ ದೃಷ್ಟಿಯಿಂದ ಅಪಾಯಕಾರಿ. ಅದರ ಕಡೆ ಗಮನಹರಿಸಲಿ. ಭಯೋತ್ಪಾದಕರ ಸ್ಲೀಪರ್ ಸೆಲ್ ರೀತಿ ಕರ್ನಾಟಕ ಬಳಕೆ ಆಗ್ತಿದೆ. ಇದಕ್ಕೆ ಎನ್ಐಎ ಮಾಹಿತಿ ಕಲೆ ಹಾಕಿದೆ. ಉಗ್ರರ ಜೊತೆ ಸಂಬಂಧ ಇರೋರನ್ನು ಬಂಧಿಸಿದೆ. ಈ ಕಡೆ ಗಮನ ಕೊಡಲಿ ಎಂದು ತಿರುಗೇಟು ಕೊಟ್ಟಿದ್ದಾರೆ.
ನೀಟ್ ಎಕ್ಸಾಂ ಮೊದಲೇ ನಿಗದಿ ಆಗಿತ್ತು. ಕೆಪಿಸಿಸಿ ಅಧ್ಯಕ್ಷರ ಅಧಿಕಾರ ಸ್ವೀಕಾರವನ್ನ ಒಂದಿನ ಹಿಂದೆ, ಮುಂದೆ ಮಾಡಿದರೆ ನೀಟ್ ಎಕ್ಸಾಂಗೆ ಬಂದ ಮಕ್ಕಳು ಎಕ್ಸಾಂನಿಂದ ವಂಚಿತರಾಗಿ ಕಣ್ಣೀರು ಹಾಕುತ್ತಿರಲಿಲ್ಲ. ಆ ಕಣ್ಣೀರಿನ ಶಾಪ ಯಾರಿಗೆ ತಟ್ಟಬೇಕು. ಇದರ ಬಗ್ಗೆ ಅವರು ಅಲೋಚನೆ ಮಾಡಲಿ. ಇದೆಲ್ಲ ಅಧಿಕಾರ ಅಹಂಕಾರದ ಪರಿಣಾಮ ಎಂದು ಕಿಡಿಕಾರಿದ್ದಾರೆ.