ಹರಿಯಾಣ, ಜೂ. 24 (DaijiworldNews/AK):ಭಾರತದ ಗ್ರಾಮೀಣ ಭಾಗದ ಬಹುತೇಕ ಮಹಿಳೆಯರು ಮದುವೆ-ಮನೆ, ಮಕ್ಕಳು ಅಂತ ಜೀವನದಲ್ಲಿ ಕಳೆದು ಹೋಗುತ್ತಾರೆ. ಆದರೆ ಕೆಲವೇ ಕೆಲವರು ಮಾತ್ರ ಅವುಗಳ ಜೊತೆಗೆ ವೃತ್ತಿಪರವಾಗಿ ಬೆಳೆಯುತ್ತಾರೆ. ಐಎಎಸ್ ಪುಷ್ಪಲತಾ ಯಾದವ್ ಇದಕ್ಕೆ ಜೀವಂತ ಉದಾಹರಣೆ.

ಪುಷ್ಪಲತಾ ಯಾದವ್ ಅವರು 2017 ರಲ್ಲಿ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅಖಿಲ ಭಾರತ 80 ನೇ ಶ್ರೇಯಾಂಕದೊಂದಿಗೆ ಐಎಎಸ್ ಅಧಿಕಾರಿಯಾಗಿದ್ದಾರೆ. ಪುಷ್ಪಲತಾ ಅವರ ಯಶೋಗಾಥೆ ತಿಳಿಯೋಣ.
ಐಎಎಸ್ ಪುಷ್ಪಲತಾ ಯಾದವ್ ಮೂಲತಃ ಹರಿಯಾಣದ ರೇವಾರಿ ಜಿಲ್ಲೆಯ ಖುಸ್ಬುರಾ ಎಂಬ ಸಣ್ಣ ಹಳ್ಳಿಯ ನಿವಾಸಿ. ಅವರು ತಮ್ಮ ಆರಂಭಿಕ ಅಧ್ಯಯನವನ್ನು ಹಳ್ಳಿಯಲ್ಲೇ ಮಾಡಿದರು. ಇದಾದ ನಂತರ 2016ರಲ್ಲಿ ಬಿ.ಎಸ್ಸಿ. ಇದರ ನಂತರ ಅವರು ಸ್ನಾತಕೋತ್ತರ ಪದವಿ ಮತ್ತು ಎಂಬಿಎ ಕೂಡ ಮಾಡಿದರು.
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ನಲ್ಲಿ ಕೆಲಸ ಪಡೆದ ಎರಡು ವರ್ಷಗಳ ನಂತರ, ಅವರು 2011 ರಲ್ಲಿ ವಿವಾಹವಾದರು. ಹರಿಯಾಣದ ಮನೇಸರ್ ಗೆ ತೆರಳಿದರು. ಮದುವೆಯಾದ ಸುಮಾರು ನಾಲ್ಕು ವರ್ಷಗಳ ನಂತರ, ಅವರು UPSC ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ಮಾಡಲು ಮನಸ್ಸು ಮಾಡಿದರು.
2015 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಗೆ ರಾಜೀನಾಮೆ ನೀಡಿದರು. ನಾಗರಿಕ ಸೇವಾ ಪರೀಕ್ಷೆಯ ತಯಾರಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಈಗ ಎರಡು ವರ್ಷದ ಮಗುವಿನ ಜವಾಬ್ದಾರಿಯೂ ಅವರ ಮೇಲಿತ್ತು.
ಆದರೆ ಪುಷ್ಪಲತಾ ಅವರ ಪತಿ ಮತ್ತು ಅತ್ತೆ ಅವರಿಗೆ ಸಂಪೂರ್ಣ ಬೆಂಬಲ ನೀಡಿದರು. ತಯಾರಿ ನಡೆಸುತ್ತಿದ್ದಾಗ, ಗಂಡ ಮಗನನ್ನು ನೋಡಿಕೊಳ್ಳುತ್ತಿದ್ದರು. ಪುಷ್ಪಲತಾ ಅವರು ಅಧ್ಯಯನದತ್ತ ಮಾತ್ರ ಗಮನ ಹರಿಸುತ್ತಿದ್ದರು. ಬೆಳಗಿನ ಜಾವ ನಾಲ್ಕು ಗಂಟೆಗೆ ಏಳುತ್ತಿದ್ದರು. ಇದಾದ ನಂತರ ಆರರಿಂದ ಏಳು ಗಂಟೆಯವರೆಗೆ ಓದುತ್ತಿದ್ದರು.
ಪುಷ್ಪಲತಾ ಯಾದವ್ ಮೂರನೇ ಪ್ರಯತ್ನದಲ್ಲಿ ಯುಪಿಎಸ್ ಸಿಗೆ ಆಯ್ಕೆಯಾದರು. ಎರಡು ಪ್ರಯತ್ನಗಳಲ್ಲಿ ವಿಫಲರಾದರೂ ಎದೆಗುಂದಲಿಲ್ಲ. ಅಂತಿಮವಾಗಿ ಕಠಿಣ ಪರಿಶ್ರಮವು ಫಲ ನೀಡಿತು. 2017 ರಲ್ಲಿ ಅವರು UPSC ಯಲ್ಲಿ ಅಂತಿಮವಾಗಿ ಆಯ್ಕೆ ಆದರು.