ದೆಹಲಿ,ಜು. 26 (DaijiworldNews/AK): ಭಾರತಕ್ಕೆ ಭಯೋತ್ಪಾದನೆಯ ಮೂಲಕ ಬೆದರಿಕೆ ಹಾಕುವವರಿಗೆ ‘ಆಪರೇಷನ್ ಸಿಂಧೂರ್’ ಸ್ಪಷ್ಟ ಸಂದೇಶ ನೀಡಿದೆ. ಪಿಒಕೆ ಹೊರತುಪಡಿಸಿ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಯುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

27ನೇ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಶನಿವಾರ (ಜು.25) ಲಡಾಖ್ನ ಡ್ರಾಸ್ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ, 1999ರ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ವೀರ ಯೋಧರಿಗೆ ಗೌರವ ಸಲ್ಲಿಸಿದರು. ಈ ವೇಳೆ, ಸೇನಾ ಸಿಬ್ಬಂದಿ ಮತ್ತು ನಿವೃತ್ತ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ‘ಆಪರೇಷನ್ ಸಿಂಧೂರ್’ ಭಾರತಕ್ಕೆ ಭಯೋತ್ಪಾದನೆಯಿಂದ ಬೆದರಿಕೆ ಹಾಕುವವರ ಭವಿಷ್ಯ ಏನಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿದೆ ಎಂದು ಎಚ್ಚರಿಕೆ ನೀಡಿದರು
ಪಾಕಿಸ್ತಾನ ಯಾವುದೇ ದುಸ್ಸಾಹಸಕ್ಕೆ ಕೈಹಾಕಿದರೆ ಅದರ ಕಲ್ಪನೆಗೂ ಮೀರಿದ ರೀತಿಯಲ್ಲಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಭಾರತೀಯ ಪಡೆಗಳು ಹೊಂದಿದೆ. ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ ಕೆಡಿಸಲು ಯಾವುದೇ ದುಷ್ಟ ಹೆಜ್ಜೆ ಇಡುವುದಕ್ಕೂ ಮುನ್ನ ಅವರು ಎರಡು ಬಾರಿ ಯೋಚಿಸಬೇಕು ಎಂದು ಎಚ್ಚರಿಸಿದರು.