ನವದೆಹಲಿ, ಸೆ.11(Daijiworld News/SS): ಓವರ್ಲೋಡ್ ನಿಯಮದನ್ವಯ ರಾಜಸ್ಥಾನ ಮೂಲದ ಟ್ರಕ್ ಮಾಲೀಕನಿಗೆ ಬರೊಬ್ಬರಿ 1.41 ಲಕ್ಷ ರೂ ದಂಡ ವಿಧಿಸಲಾಗಿದೆ.
ರಾಜಸ್ಥಾನದ ಬಿಕಾನೇರ್ನ ಹರ್ಮಾನ್ ರಾಮ್ ಭಾಂಬು ಎಂಬ ಟ್ರಕ್ ಮಾಲಿಕನಿಗೆ ಟ್ರಕ್ನಲ್ಲಿ ನಿಯಮಕ್ಕಿಂತ ಹೆಚ್ಚಿನ ಸರಕು ತುಂಬಿದ್ದಕ್ಕಾಗಿ ಓವರ್ಲೋಡ್ ನಿಯಮದನ್ವಯ ದಂಡ ವಿಧಿಸಲಾಗಿದೆ.
ಸೆಪ್ಟೆಂಬರ್ 5ರಂದು ದೆಹಲಿ ಪೊಲೀಸರು ದಂಡ ವಿಧಿಸಿ ಟ್ರಕ್ ವಶಕ್ಕೆ ಪಡೆದಿದ್ದರು. ಇಷ್ಟು ದುಬಾರಿ ಮೊತ್ತವನ್ನು ಹೊಂದಿಸಲು 5 ದಿನವೇ ಬೇಕಾಯಿತು. 5 ದಿನದ ನಂತರ ಸೆಪ್ಟೆಂಬರ್ 9ರಂದು ಕೋರ್ಟ್ನಲ್ಲಿ ದಂಡ ಪಾವತಿಸಿ ವಾಹನ ಬಿಡಿಸಿಕೊಂಡಿದ್ದೇವೆ ಎಂದು ಟ್ರಕ್ ಮಾಲಿಕ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ದಂಡ ಪರಿಷ್ಕರಣೆ ಮಾಡಿದ ನಂತರ ಸಂಚಾರ ನಿಮಯ ಉಲ್ಲಂಘಿಸಿದ್ದಕ್ಕಾಗಿ ಹಲವು ವಾಹನ ಸವಾರರು ಭಾರಿ ದಂಡ ತೆತ್ತು ಸುದ್ದಿಯಾಗಿದ್ದರು. ಸೆಪ್ಟೆಂಬರ್ 3ರಂದು ಒಡಿಶಾದ ಸಂಬಾಲ್ಪುರ ಜಿಲ್ಲೆಯಲ್ಲಿ ಟ್ರಕ್ ಡ್ರೈವರ್ಗೆ 86,500 ರೂ. ದಂಡ ವಿಧಿಸಲಾಗಿತ್ತು. ಈಗ ದುಬಾರಿ ದಂಡದ ದಾಖಲೆಯನ್ನು ರಾಜಸ್ಥಾನ ಮೂಲದ ಟ್ರಕ್ ಡ್ರೈವರ್ ಮುರಿದಿದ್ದು, ಬರೋಬ್ಬರಿ 1.41 ಲಕ್ಷ ರೂ. ದಂಡ ಕಟ್ಟಿದ್ದಾರೆ.