ಲಖನೌ, ಸೆ.12(Daijiworld News/SS): ಉಗ್ರವಾದದ ಸವಾಲುಗಳನ್ನು ಎದುರಿಸಲು ಭಾರತ ಸಮರ್ಥವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಯೋತ್ಪಾದನೆಯ ಬೇರುಗಳು ನೆರೆಯ ಪಾಕಿಸ್ತಾನದ ನೆಲದಲ್ಲಿ ಆಳವಾಗಿ ಊರಿವೆ. ಉಗ್ರರ ವಿರುದ್ಧ ಭಾರತ ತನ್ನ ಸಾಮರ್ಥ್ಯವನ್ನು ಈಗಾಗಲೇ ತೋರಿಸಿಕೊಟ್ಟಿದೆ. ಮುಂದೆಯೂ ಇದನ್ನು ಮಾಡಿ ತೋರಿಸಲಿದೆ ಎಂದು ಹೇಳಿದರು.
ಉಗ್ರವಾದದ ವಿರುದ್ಧ ಕಠಿಣವಾದ ಕ್ರಮಗಳನ್ನು ಜಾರಿಗೊಳಿಸಲು ಸಾಧ್ಯವಾಗುವಂತೆ ‘ಅಕ್ರಮ ಚಟುವ ಟಿಕೆ ತಡೆ ಕಾಯ್ದೆ’ಗೆ ಸರ್ಕಾರ ತಿದ್ದುಪಡಿ ತಂದಿದೆ. ಇನ್ನು ಮುಂದೆ ಉಗ್ರರು ತಮ್ಮ ಸಂಘಟನೆಗಳ ಹೆಸರನ್ನು ಬದಲಾಯಿಸಿಕೊಂಡು ಅವಿತು ಕೊಂಡಿರಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಭಯೋತ್ಪಾದನೆ ಸಿದ್ಧಾಂತವನ್ನು ಪ್ರಾಯೋಜಿಸುತ್ತಿರುವವರ ವಿರುದ್ಧ ಜಾಗತಿಕ ಮಟ್ಟದಲ್ಲಿ ಪ್ರಬಲ ಕಾರ್ಯಾ ಚರಣೆಗೆ ಅವರು ಕರೆ ನೀಡಿದರು. ಮಾತ್ರವಲ್ಲ ‘ಭಯೋತ್ಪಾದನೆಗೆ ಆಶ್ರಯ ನೀಡಿ, ಉಗ್ರರಿಗೆ ತರಬೇತಿ ಕೊಡುತ್ತಿರುವವರ ವಿರುದ್ಧ ಇಡೀ ಜಗತ್ತು ಸ್ಪಷ್ಟ ನಿರ್ಣಯ ತೆಗೆದುಕೊಳ್ಳುವ ಅಗತ್ಯವಿದೆ’ ಎಂದು ಮೋದಿ ಹೇಳಿದರು.
ಇದೇ ವೇಳೆ ಪ್ಲಾಸ್ಟಿಕ್ ನಿಷೇಧದ ವಿಚಾರವಾಗಿ ಮಾತನಾಡಿದ ಪ್ರಧಾನಿ, ಒಮ್ಮೆ ಬಳಸುವ ಪ್ಲಾಸ್ಟಿಕ್ ಬೇಡ, ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್ ಉಪಯೋಗವನ್ನು ನಿಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದರು. ವ್ಯಾಪಕ ಪ್ರಮಾಣದಲ್ಲಿ ಬಳಸುವ ಪ್ಲಾಸ್ಟಿಕ್ನಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಜಾನುವಾರುಗಳು ಹಾಗೂ ಮೀನುಗಳ ಸಾವಿಗೂ ಕಾರಣವಾಗುತ್ತದೆ ಎಂದು ಹೇಳಿದರು.