ಮುಂಬೈ, ಆ. 16 (DaijiworldNews/AA): ಚಾಟ್ ಜಿಪಿಟಿ ಬಳಸಿ ವ್ಯಕ್ತಿಯೋರ್ವ ಚಪ್ಪಲಿಗಳ ರಾಶಿಯಲ್ಲಿ ಕಳೆದುಹೋದ ಚಪ್ಪಲಿ ಹುಡುಕಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಕ್ತಿಯ ಬುದ್ಧಿವಂತಿಕೆಯನ್ನು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶುಭಾಂಗ್ ಬೋರಕರ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಚಿತ್ರ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಚಪ್ಪಲಿಗಳ ರಾಶಿ ಕಂಡು ಬಂದಿದ್ದು, ಇದರಲ್ಲಿನ ವ್ಯಕ್ತಿ ಕಳೆದುಹೋದ ತನ್ನ ಚಪ್ಪಲಿಯನ್ನು ಹುಡುಕಿ ಸುಸ್ತಾಗಿ ಹೋಗಿದ್ದಾನೆ. ಕೊನೆಗೆ ಚಪ್ಪಲಿ ಹುಡುಕಲು ಚಾಟ್ ಜಿಪಿಟಿ ಸಹಾಯ ಪಡೆದಿದ್ದಾನೆ. ಚಪ್ಪಲಿಗಳ ರಾಶಿಯ ಫೋಟೋ ತೆಗೆದು ಕಳೆದುಕೊಂಡ ಚಪ್ಪಲಿಯನ್ನು ಹುಡುಕಿಕೊಡುವಂತೆ ಚಾಟ್ ಜಿಪಿಟಿಗೆ ಕೇಳಿಕೊಂಡಿರುವುದನ್ನು ಕಾಣಬಹುದು. ಕೂಡಲೆ ಚಾಟ್ ಜಿಪಿಟಿ ಚಪ್ಪಲಿಯನ್ನು ಪತ್ತೆಹಚ್ಚಿದೆ. ಚಾಟ್ ಜಿಪಿಟಿ ಚಪ್ಪಲಿ ಹುಡುಕಿಕೊಟ್ಟದ್ದನ್ನು ಕೇಳಿ ನಗುತ್ತಿರುವುದನ್ನು ಕಾಣಬಹುದಾಗಿದೆ.
ಸದ್ಯ ಈ ವಿಡಿಯೋ 23 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಓರ್ವ 'ಸ್ಮಾರ್ಟ್ ಐಡಿಯಾ' ಎಂದು ಕಮೆಂಟ್ ಮಾಡಿದ್ದರೆ, ಇನ್ನೋರ್ವ 'ಚಾಟ್ ಜಿಪಿಟಿ ಯನ್ನು ಹೀಗೂ ಬಳಸಬಹುದೆಂದು ತೋರಿಸಿಕೊಟ್ಟ ಮಹಾನುಭಾವ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೋರ್ವ, 'ಜನ್ರು ಇಷ್ಟು ಅಪ್ಡೇಟ್ ಆಗಿದ್ದಾರೆ ಎಂದು ಗೊತ್ತೇ ಇರಲಿಲ್ಲ' ಎಂದು ತಿಳಿಸಿದ್ದಾರೆ.