ಮಥುರಾ, ಸೆ.12(Daijiworld News/SS): ಪಶು ಸಂಗೋಪನೆ ಭಾರತೀಯ ಗ್ರಾಮೀಣ ಆರ್ಥಿಕತೆಗೆ ಮುಖ್ಯವಾದುದು. ಪರಿಸರ ಹಾಗೂ ಪಶು ಸಂಗೋಪನೆ ಒಂದಕ್ಕೊಂದು ಬೆಸದುಕೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ನಮ್ಮ ದೇಶದ ಗ್ರಾಮೀಣ ಅರ್ಥಿಕತೆಯ ಬಗ್ಗೆ ಪ್ರಾಣಿಗಳಿಲ್ಲದೆ ಮಾತನಾಡಲು ಸಾಧ್ಯವೆಎಂದು ಪ್ರಶ್ನಿಸಿದ ಮೋದಿ, ಗೋವು ಹಾಗೂ ಓಂ ಕುರಿತು ಮಾತನಾಡಿದರೆ ದೇಶವನ್ನು 16ನೇ ಶತಮಾನಕ್ಕೆ ವಾಪಸ್ ಕರೆದೊಯ್ಯುತ್ತಿದ್ದಾರೆ ಎಂದು ಕೆಲವರು ಹೇಳುತ್ತಿರುವುದು ದುರದೃಷ್ಟಕರ. ಇಂತಹವರಿಗೆ ದೇಶದ ಗ್ರಾಮೀಣ ಭಾಗದ ಆರ್ಥಿಕತೆ ಕುರಿತು ಮಾತನಾಡುವ ಹಕ್ಕಿಲ್ಲ. ಗೋವು ಹಾಗೂ ಓಂ ಇವರೆಡೂ ಸಾರ್ವಕಾಲಿಕ ಸತ್ಯವಾಗಿರುವಂತಹದ್ದು ಎಂದು ಹೇಳಿದ್ದಾರೆ.
ಪರಿಸರ ಮತ್ತು ಪ್ರಾಣಿಗಳು ಭಾರತದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಾವು ಪ್ರಕೃತಿ ಮತ್ತು ಆರ್ಥಿಕ ಪ್ರಗತಿಯ ಬಗ್ಗೆ ಸಮತೋಲನವನ್ನು ಕಾಪಾಡಿಕೊಂಡು ಸಬಲೀಕೃತ ಭಾರತದತ್ತ ಸಾಗಬೇಕುಎಂದು ತಿಳಿಸಿದರು.
ನಮ್ಮ ದೇಶದಲ್ಲಿ ಗೋವು ಮತ್ತು ಓಂ ಪದಗಳನ್ನು ಕೇಳಿದರೆ ಕೆಲವರಿಗೆ ಆಗುವುದಿಲ್ಲ. ಈ ಪದಗಳನ್ನು ಕೇಳಿದರೆ ಅವರು ನಮ್ಮ ದೇಶ 16ನೇ ಶತಮಾನಕ್ಕೆ ಹೋಗಿದೆ ಎಂದು ಭಾವಿಸುತ್ತಾರೆ. ಪಶು ಸಂಗೋಪನೆ ಭಾರತೀಯ ಗ್ರಾಮೀಣ ಆರ್ಥಿಕತೆಗೆ ಮುಖ್ಯವಾದುದು. ಪರಿಸರ ಹಾಗೂ ಪಶು ಸಂಗೋಪನೆ ಒಂದಕ್ಕೊಂದು ಬೆಸದುಕೊಂಡಿವೆ ಎಂದು ಹೇಳಿದ್ದಾರೆ.