ನವದೆಹಲಿ, ಸೆ 12 (Daijiworld News/MSP): ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರನ್ನು ಗುರುವಾರ ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿದೆ. 23ರ ವಯಸ್ಸಿನ ಐಶ್ವರ್ಯಾ ಬೆಂಗಳೂರಿನಲ್ಲಿ ನೆಲೆಸಿದ್ದು, ವಿಚಾರಣೆಗೆ ಹಾಜರಾಗಲು ದಿಲ್ಲಿಗೆ ಬರುವಂತೆ ಈ.ಡಿ. ಮಂಗಳವಾರ ನೋಟಿಸ್ ಜಾರಿಗೊಳಿಸಿತ್ತು.
ನೋಟೀಸ್ ಹಿನ್ನಲೆ ಐಶ್ವರ್ಯಾ ದೆಹಲಿಯ ಲೋಕನಾಯಕ ಭವನದಲ್ಲಿರುವ ಈ.ಡಿ ಕಚೇರಿಗೆ ಹಾಜರಾಗಿದ್ದರು. ಬೆಳಗ್ಗೆ ಹನ್ನೊಂದು ಗಂಟೆಯಿಂದಲೇ ವಿಚಾರಣೆ ಆರಂಭವಾಗಿದ್ದು , ಈ ವೇಳೆ ಶಿವಕುಮಾರ್ ಹಾಗೂ ಐಶ್ವರ್ಯ ಮುಖಾಮುಖಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇವರಿಬ್ಬರಿಗೂ ಡಿಕೆಶಿ ಸಹೋದರ ಡಿ.ಕೆ ಸುರೇಶ್ ಮನೆಯಿಂದಲೇ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. 23 ವರ್ಷದ ಡಿಕೆಶಿ ಪುತ್ರಿ ಐಶ್ವರ್ಯ 108 ಕೋಟಿ ಆಸ್ತಿ ಸಂಪಾದನೆ ಮಾಡಿದ್ದಾರೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಅಪಾರ ಪ್ರಮಾಣ ಆಸ್ತಿಯನ್ನು ಕೇವಲ ಐದು ವರ್ಷದಲ್ಲಿ ಮಾಡಲು ಸಾಧ್ಯವೇ? ಪುತ್ರಿಗೆ ಡಿಕೆಶಿ 11 ಸಾಲ ಕೋಟಿ ರೂಪಾಯಿ ಸಾಲ ನೀಡಿದ್ಯಾಕೆ? ಎಲ್ಲವನ್ನು ಈಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.