ನವದೆಹಲಿ, ಸೆ.13(Daijiworld News/SS): ಮೋದಿ ಸರ್ಕಾರದಡಿಯಲ್ಲಿ ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷ ಜನತೆಯ ಆದೇಶವನ್ನು ಅತ್ಯಂತ ಅಪಾಯಕಾರಿ' ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿದೆ. ಬಿಜೆಪಿ ಸರ್ಕಾರವು ಕಾಂಗ್ರೆಸ್ ಪಕ್ಷದ ಸಂಕಲ್ಪ ಮತ್ತು ತಾಳ್ಮೆಯ ಸ್ಥಿತಿಯನ್ನು ಪರೀಕ್ಷಿಸುತ್ತಿದೆ. ಸರ್ಕಾರ ಜನರ ಸಾಮಾನ್ಯರ ವಿಶ್ವಾಸದೊಡನೆ ಆಟವಾಡುತ್ತಿದೆ. ಆರ್ಥಿಕ ಜಗತ್ತಿನಲ್ಲಿ ಚ್ಚುತ್ತಿರುವ ನಷ್ಟಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರವು ಬೇರೆ ಬೇರೆ ಕಾರ್ಯತಂತ್ರ ಬಳಸುತ್ತಿದೆ ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಬಿಜೆಪಿಯನ್ನು ಹಣಿಯಲು ನಮಗುಳಿದಿರುವುದು ಚಳವಳಿಯ ಮಾರ್ಗವೊಂದೇ ಆಗಿದೆ. ಹಾಗಾಗಿ ಪಕ್ಷದ ಕಾರ್ಯಕರ್ತರು, ನಾಯಕರು ಚಳವಳಿ ಕಾರ್ಯಸೂಚಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಮೋದಿ ಸರ್ಕಾರದ ಅಡಿಯಲ್ಲಿ ಪ್ರಜಾಪ್ರಭುತ್ವವು ಅಪಾಯದಲ್ಲಿದೆ. ಸರ್ಕಾರ ಜನತೆಯು ನೀಡಿದ ಜನಾದೇಶವನ್ನು 'ಅತ್ಯಂತ ಅಪಾಯಕಾರಿ' ಶೈಲಿಯಲ್ಲಿ ದುರುಪಯೋಗಪಡಿಸಿಕೊಂಡಿದೆ ಮತ್ತು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ದೂರಿದ್ದಾರೆ.