ಮಧ್ಯಪ್ರದೇಶ,ಸೆ 13 (Daijiworld News/RD): ಗಣೇಶ ವಿಸರ್ಜನೆ ವೇಳೆ ಬೋಟ್ ಮುಳುಗಿ 11 ಜನ ಸಾವನ್ನಪ್ಪಿದ್ದ ಘಟನೆ ಮಧ್ಯಪ್ರದೇಶದ ರಾಜಧಾನಿ ಕತ್ಲಾಪುರ ಘಾಟ್ ಬಳಿ ಶುಕ್ರವಾರ ಸಂಭವಿಸಿದೆ.
ಇಂದು ಮುಂಜಾನೆ 4.30 ರ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಈ ಸಮಯದಲ್ಲಿ ಕನಿಷ್ಠ 40 ಪೊಲೀಸ್ ಸಿಬ್ಬಂದಿ, ಇತರ ಅಧಿಕಾರಿಗಳು, ವೃತ್ತಿಪರ ಈಜುಗಾರರು ಸ್ಥಳದಲ್ಲಿದ್ದರೂ ಭಾರಿ ಅವಘಡ ಸಂಭವಿಸಿದೆ.
ಅಗ್ನಿ ಶಾಮಕ ದಳ ಮತ್ತು ಎನ್ಡಿಆರ್ಎಫ್ ತಂಡ ರಕ್ಷಣಾ ಕರ್ಯಾಚರಣೆ ನಡೆಸುತ್ತಿದ್ದು, ಈಗಾಗಲೇ 11 ಮೃತದೇಹಗಳನ್ನು ಹೊರತೆಗೆದಿದ್ದು, 5 ಜನರನ್ನು ರಕ್ಷಿಸಲಾಗಿದೆ, ನಾಪತ್ತೆಯಾದವರಿಗಾಗಿ ಶೋಧ ಮುಂದುವರಿದಿದೆ ಎಂದು ಭೋಪಾಲ್ನ ಹೆಚ್ಚುವರಿ ಪೊಲೀಸ್ ಆಯುಕ್ತ ಅಖಿಲ್ ಪಟೇಲ್ ತಿಳಿಸಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ಕೂಡ ಸ್ಥಳದಲ್ಲಿದೆ.
ಇಲವಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ರಾಜ್ಯ ಸರಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಮೃತರ ಕುಟುಂಬಕ್ಕೆ ಮಧ್ಯ ಪ್ರದೇಶ ಸರಕಾರ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.