ಮೈಸೂರು, ಸೆ 13 (Daijiworld News/MSP): 'ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಬಾಹ್ಯಕಾಶ ಸಂಶೋಧನಾ ಕೇಂದ್ರದಲ್ಲಿ ಇದ್ದದ್ದು ವಿಜ್ಞಾನಿಗಳ ಪಾಲಿಗೆ ಅಪಶಕುಶವಾಯಿತು' ಎಂದು ಮಾಜಿ ಮುಖ್ಯಮಂತ್ರಿ- ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಎಚ್. ಡಿ. ಕುಮಾರಸ್ವಾಮಿ ವಿಶ್ಲೇಷಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸೆ. 7 ರಂದು ಮುಂಜಾನೆ ಚಂದ್ರನ ಮೇಲ್ಮೈನಲ್ಲಿ ಇಳಿದರೂ ಲ್ಯಾಂಡರ್ ವಿಕ್ರಮ್ ಸಂಪರ್ಕ ಕಡಿದುಕೊಳ್ಳಲು ಮೋದಿಯ ಉಪಸ್ಥಿತಿಯೇ ಕಾರಣ. ಅದೇ ಅಪಜಯವಾಯಿತು ಎಂದು ಆರೋಪಿಸಿದ್ದಾರೆ.
ಜುಲೈನಲ್ಲಿ ನಡೆದ ಚಂದ್ರಯಾನ -2 ರ ಉಡಾವನೆ ಯಶಸ್ವಿ ಆಗಿತ್ತು. ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲೆ ಇನ್ನೇನು ಇಳಿಯಬೇಕು ಎನ್ನುವಷ್ಟರಲ್ಲಿ ಸಂಪರ್ಕ ಕಳೆದುಕೊಂಡಿತ್ತು. ಈ ಮಿಷನ್ ಗಾಗಿ ವಿಜ್ಞಾನಿಗಳು 10-12 ಕಠಿಣ ಪರಿಶ್ರಮ ಹಾಕಿದ್ದರೂ ಪ್ರಧಾನಿ ನರೇಂದ್ರ ಮೋದಿ ತಾವೇ ಚಂದ್ರಯಾನ ಎರಡನ್ನು ಅಲ್ಲಿಗೆ ತಲುಪಿಸುತ್ತಿರುವವರ ಥರ ಬಂದು ಅಲ್ಲಿ ಕುಳಿತಿದ್ದರು. ಇದೇ ಅಪಶಕುಶವಾಯಿತು ಎಂದು ಕುಮಾರಸ್ವಾಮಿ ಹೇಳಿದ್ದಾರೆ.