ಮುಂಬೈ, ಸೆ.13(Daijiworld News/SS): ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 14 ಸಾವಿರ ಕೋಟಿ ರೂ. ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ನೀರವ್ ಮೋದಿ ಸಹೋದರ ನೇಹಾಲ್ ಮೋದಿಗೆ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ ಎಂದು ತಿಳಿದುಬಂದಿದೆ.
ಜಾರಿ ನಿರ್ದೇಶನಾಲಯ ಮನವಿ ಮೇರೆಗೆ ರೆಡ್ ಕಾರ್ನರ್ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ. ಪಿಎನ್ಬಿ ಹಗರಣದಲ್ಲಿ ನೀರವ್ ಮೋದಿ ಸಹೋದರನ ಪಾತ್ರ ಇರಬಹುದು ಎಂದು ಲಂಡನ್ ನ್ಯಾಯಲಯ ಶಂಕೆ ವ್ಯಕ್ತಪಡಿಸಿತ್ತು. ಈ ಬೆನ್ನಲ್ಲೇ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ನೇಹಾಲ್ ಮೋದಿಗೆ ನೀಡಲಾಗಿದೆ.
ನೇಹಾಲ್ ಬೆಲ್ಜಿಯಂ ಪ್ರಜೆಯಾಗಿದ್ದು, ಈತನ ವಿರುದ್ಧ ಹಣ ಅಕ್ರಮ ವ್ಯವಹಾರ ನಡೆಸಿದ ಆರೋಪವಿದೆ. ಸದ್ಯ ನೆಹಾಲ್ ಅಮೆರಿಕದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.