ನವದೆಹಲಿ, ಸೆ.13(Daijiworld News/SS): ದೆಹಲಿಯಲ್ಲಿ ಸಮ-ಬೆಸ ಯೋಜನೆಯನ್ನು ಜಾರಿಗೆ ತರುವ ಅವಶ್ಯಕತೆ ಇಲ್ಲ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ನವೆಂಬರ್ ಆರಂಭದಿಂದಲೇ ಸಮ-ಬೆಸ ಸಂಖ್ಯೆಯ ವಾಹನ ಸಂಚಾರವನ್ನು ಪುನಾರಾರಂಭಿಸಲಾಗುವುದು. ವಾಯುಮಾಲಿನ್ಯವನ್ನು ಪ್ರತೀನಿತ್ಯ ಪರಿಶೀಲನೆ ನಡೆಸುತ್ತಿರುವ ಏಕೈಕ ರಾಜ್ಯವೆಂದರೆ ಅದು ದೆಹಲಿ ಮಾತ್ರ. ಸಮ-ಬೆಸ ನಿಯಮವನ್ನು ಇದು ಮೂರನೇ ಬಾರಿಗೆ ಜಾರಿಗೆ ತರಲಾಗುತ್ತಿದೆ ಎಂದು ಕೇಜ್ರಿವಾಲ್ ಹೇಳಿದ್ದರು. ಈ ಬೆನ್ನಲ್ಲೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಯೋಜನೆ ಜಾರಿ ಬೇಕಿಲ್ಲ ಎಂದು ಹೇಳಿದ್ದಾರೆ.
ಈಗ ದೆಹಲಿಯಲ್ಲಿ ಸಮ-ಬೆಸ ಯೋಜನೆಯನ್ನು ಜಾರಿಗೆ ತರುವ ಅವಶ್ಯಕತೆ ಇಲ್ಲ. ಏಕೆಂದರೆ ನಾವು ನಿರ್ಮಾಣ ಮಾಡಿರುವ ಹೊಸ ರಿಂಗ್ ರೋಡ್ ನಿಂದಾಗಿ ಮಾಲಿನ್ಯ ನಿಯಂತ್ರಣ ಸಾಧ್ಯವಾಗುತ್ತದೆ. ಇನ್ನು ಮೂರು ವರ್ಷದಲ್ಲಿ ದೆಹಲಿ ಮಾಲಿನ್ಯ ಮುಕ್ತವಾಗಲಿದೆ ಎಂದು ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ನಾಗಪುರದಲ್ಲಿ ಶೀಘ್ರದಲ್ಲೇ ವಿದ್ಯುತ್ ಚಾಲಿತ್ ಬಸ್ ಸಂಚಾರ ಆರಂಭವಾಗಲಿದೆ ಎಂದು ಗಡ್ಕರಿ ಘೋಷಣೆ ಮಾಡಿದ್ದಾರೆ.