ನವದೆಹಲಿ, ಸೆ 13 (Daijiworld News/MSP): ಐಎನ್ಎಕ್ಸ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ಶರಣಾಗುವ ವಿಚಾರಕ್ಕೆ ಸಂಬಂಧಿಸಿದ ತೀರ್ಪನ್ನು ನವದೆಹಲಿಯ ವಿಶೇಷ ಕೋರ್ಟ್ ಶುಕ್ರವಾರ ಪ್ರಕಟಿಸಿದ್ದು, ಕೇಂದ್ರದ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರ ಅರ್ಜಿಯನ್ನು ಕೋರ್ಟ್ ತಿರಸ್ಕೃರಿಸಿದೆ.
ಈ ಹಿನ್ನಲೆಯಲ್ಲಿ ಸೆ. 19 ರವರೆಗೂ ತಿಹಾರ್ ಜೈಲೇ ಗತಿಯಾಗಿದೆ. ಚಿದಂಬರಂ ತಿಹಾರ್ ಜೈಲಿನಲ್ಲಿ ಇದ್ದುಕೊಂಡೇ ಇಡಿ ಮುಂದೆ ಶರಣಾಗುವುದಕ್ಕೆ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರು. ಇಂದು ಪ್ರಕರಣದ ತೀರ್ಪು ನೀಡಿದ ಅಜಯ್ ಕುಮಾರ್ ಕುಹಾರ್ ಅರ್ಜಿಯನ್ನು ವಜಾಗೊಳಿಸಿ ಅದೇಶ ನೀಡಿದ್ದಾರೆ.
ಚಿದು ಪರ ವಾದಿಸಿದ ಕಪಿಲ್ ಸಿಬಲ್ “ನನ್ನ ಕಕ್ಷಿದಾರ ನರಳುವಂತೆ ಮಾಡಬೇಕು ಎನ್ನುವುದೇ ಜಾರಿ ನಿರ್ದೇಶನಾಲಯದ ದುರುದ್ದೇಶ’ ಎಂದು ದೂರಿದ್ದರು.