ನವದೆಹಲಿ,ಸೆ.16 (DaijiworldNews/AK): ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ 76ನೇ ಜನ್ಮದಿನದ ಹೊಸ್ತಿಲಲ್ಲಿದ್ದು, ಈ ಐತಿಹಾಸಿಕ ಸಂದರ್ಭವನ್ನು ಸಂಭ್ರಮಿಸಲು ಭಾರತೀಯ ಜನತಾ ಪಾರ್ಟಿ ದೇಶಾದ್ಯಂತ ಬೃಹತ್ ಅಭಿಯಾನಗಳನ್ನು ಘೋಷಿಸಿದೆ.

ಸೆಪ್ಟೆಂಬರ್ 17 ರ ಸಾಯಂಕಾಲ 6 ಗಂಟೆಯಿಂದ ಬೆಳಿಗ್ಗೆ 7 ಗಂಟೆಯ ನಡುವೆ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ‘ಆಶೀರ್ವಾದದ ದೀಪ’ ಹಚ್ಚಿ ಪ್ರಧಾನಿಯವರನ್ನು ಹಾರೈಸಬೇಕು,” ಎಂದು ನಿತಿನ್ ನವೀನ್ ವೀಡಿಯೊ ಸಂದೇಶ ನೀಡಿದ್ದಾರೆ.
2014 ರಿಂದ ಭಾರತವು ಪರಿವರ್ತನಾತ್ಮಕ ಬದಲಾವಣೆಗಳನ್ನು ಕಂಡಿದ್ದು, 2047 ರ ವೇಳೆಗೆ ವಿಕಸಿತ ಭಾರತ ಕಟ್ಟುವತ್ತ ಹೆಜ್ಜೆ ಇಡುತ್ತಿದೆ ಎಂದು ಬಿಜೆಪಿ ಹೇಳಿದೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ನನ್ನು ಪ್ರಧಾನಿ ಮೋದಿ ಹೊಂದಿದ್ದಾರೆ.
ಸಾಮಾಜಿಕ ಜಾಲತಾಣಗಳ ಜಾಗತಿಕ ರಂಗದಲ್ಲಿ ಪ್ರಧಾನಿ ಮೋದಿ ತಮ್ಮ ನಾಯಕತ್ವದ ಕ್ರಾಂತಿಯನ್ನೇ ಸೃಷ್ಟಿಸಿದ್ದಾರೆ. ಪ್ರಧಾನಿ ಮೋದಿ ಅವರ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬರ್ಸ್ ಸಂಖ್ಯೆ 3 ಕೋಟಿ ಗಡಿ ದಾಟಿದ್ದು, ಜಗತ್ತಿನ ಯಾವುದೇ ಪ್ರಭಾವಿ ನಾಯಕನಿಗಿಂತ ಬಹು ಎತ್ತರದಲ್ಲಿದ್ದಾರೆ. ಬ್ರೆಜಿಲ್ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸೋನಾರೊ (ಎರಡನೇ ಸ್ಥಾನ) ಅವರ ಸಬ್ಸ್ಕ್ರೈಬರ್ಸ್ ಸಂಖ್ಯೆ ಮೋದಿ ಅವರ ನಾಲ್ಕನೇ ಒಂದು ಭಾಗದಷ್ಟಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗಿಂತ 7 ಪಟ್ಟು ಹೆಚ್ಚು ಹಾಗೂ ಭಾರತದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗಿಂತ 3 ಪಟ್ಟು ಹೆಚ್ಚು ಯೂಟ್ಯೂಬ್ ಸಬ್ಸ್ಕ್ರೈಬರ್ಗಳನ್ನು ಮೋದಿ ಹೊಂದಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಇನ್ಸ್ಟಾಗ್ರಾಮ್ನಲ್ಲಿ 10 ಕೋಟಿ ಫಾಲೋವರ್ಸ್ ಹೊಂದಿದ ವಿಶ್ವದ ಮೊದಲ ರಾಜಕಾರಣಿ ಎಂಬ ಐತಿಹಾಸಿಕ ದಾಖಲೆ ಬರೆದಿದ್ದರು.
ನೀಟ್ ಪರೀಕ್ಷೆ ಅಕ್ರಮದ ವಿರೋಧ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರು ರಾತ್ರಿ 12 ಗಂಟೆಗೆ ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ಮಾಡಿದರು. ಈ ರೀಲ್ಸ್ನಲ್ಲಿ ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳ ಹಲವು ಪ್ರಮುಖ ಆತಂಕ ಹಾಗೂ ಕಾಳಜಿಗಳಿಗೆ ಸ್ಪಂದಿಸಿ, ಸರ್ಕಾರ ಕೈಗೊಳ್ಳಲಿರುವ ಕ್ರಮಗಳ ಕುರಿತು ವೀಡಿಯೊ ಸಂದೇಶವೊಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಈ ಏಕೈಕ ವೀಡಿಯೊ 300 ಮಿಲಿಯನ್ (30 ಕೋಟಿ) ವೀಕ್ಷಣೆಗಳನ್ನು ಹಾಗೂ 16 ಮಿಲಿಯನ್ (1.6 ಕೋಟಿ) ಲೈಕ್ಸ್ಗಳನ್ನು ಗಳಿಸಿ ಹೊಸ ದಾಖಲೆ ಬರೆದಿತ್ತು.