ಬೆಂಗಳೂರು, ಸೆ.20 (DaijiworldNews/AA): ರಾಜ್ಯದಲ್ಲಿ ವಂದೇ ಮಾತರಂ ಸಮರ ತಾರಕಕ್ಕೇರುವ ಲಕ್ಷಣ ಕಾಣ್ತಿದೆ. ಸೋಮವಾರದ ಅಧಿವೇಶನದಲ್ಲಿ ವಂದೇ ಮಾತರಂ ಸಂಪೂರ್ಣವಾಗಿ ಹಾಡಬೇಕು. ನಾವು ಪೂರ್ತಿ ವಂದೇ ಮಾತರಂ ಹಾಡೇ ಹಾಡ್ತೀವಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸವಾಲೆಸೆಗಿದ್ದಾರೆ.

ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಮ್ಮ ರಕ್ತದ ಕಣ ಕಣದಲ್ಲೂ ವಂದೆ ಮಾತರಂ ಗೀತೆ ಇದೆ. ಡಿಕೆಯಂತಹ ನೂರು ಜನ ಡಿ.ಕೆ ಶಿವಕುಮಾರ್ ಬಂದರೂ ನಾವು ಹಾಡೇ ಹಾಡ್ತೀವಿ. ನಾನು ಪೂರ್ತಿ ವಂದೇ ಮಾತರಂ ಹಾಡ್ತೀನಿ. ಕೇಸು ಹಾಕಿ ನೋಡೋಣ" ಎಂದು ಹೇಳಿದರು.
"ಮಸೀದಿಗಳಿಂದ ದಿನ ಬೆಳಗ್ಗೆ ಅಲ್ಲಾಹು ಅಕ್ಬರ್ ಅಂತ ಕೂಗ್ತಾನೆ ಇರ್ತಾರೆ. ಅಲ್ಲಾ ಒಬ್ಬನೇ ದೇವರು ಅಂತ ನಾವು ಕೇಳಿಸಿಕೊಳ್ಳಬೇಕು. ನಾವು ಮಾ ದುರ್ಗೆ ಅಂತ ಹೇಳಿದ್ರೆ ಕಾಂಗ್ರೆಸ್ನವರಿಗೆ ಕೇಳಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ದೇಶಕ್ಕೆ ದ್ರೋಹ ಬಗೆಯುತ್ತಿದೆ" ಎಂದರು.