ನವದೆಹಲಿ, ಸೆ.24 (DaijiworldNews/AK):ಎಂಟಿ ಎಂ ಹುರುನ್ ಇಂಡಿಯಾ ರಿಚ್ ಲಿಸ್ಟ್ 2026’ ಬಿಡುಗಡೆ ಮಾಡಿದೆ. . ಈ ಬಾರಿ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ಕುಟುಂಬ, ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಮತ್ತೆ ಮೊದಲ ಸ್ಥಾನಕ್ಕೇರಿದ್ದಾರೆ.

ಅದಾನಿ ಹಾಗೂ ಕುಟುಂಬದ ಒಟ್ಟು ಸಂಪತ್ತು ಶೇ.13ರಷ್ಟು ಏರಿಕೆಯಾಗಿದ್ದು, 9.23 ಲಕ್ಷ ಕೋಟಿ ರೂ.ಗೆ ತಲುಪಿದೆ. ಮತ್ತೊಂದೆಡೆ, ಮುಕೇಶ್ ಅಂಬಾನಿ ಹಾಗೂ ಕುಟುಂಬದ ಸಂಪತ್ತು ಶೇ.10ರಷ್ಟು ಕುಸಿದು 8.63 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಇದರಿಂದಾಗಿ ಅದಾನಿ ಹಾಗೂ ಅಂಬಾನಿ ಕುಟುಂಬಗಳ ಸಂಪತ್ತಿನ ನಡುವೆ ಸುಮಾರು 59,400 ಕೋಟಿ ರೂ. ವ್ಯತ್ಯಾಸ ಉಂಟಾಗಿದೆ.
ಉಕ್ಕು ಉದ್ಯಮಿ ಲಕ್ಷ್ಮಿ ನಿವಾಸ್ ಮಿತ್ತಲ್ ಹಾಗೂ ಅವರ ಕುಟುಂಬದ ಸಂಪತ್ತು ಈ ಬಾರಿ ಏರಿಕೆ ಕಂಡಿದೆ. ಅವರ ಸಂಪತ್ತು ಸುಮಾರು ಎರಡು ಪಟ್ಟು ಹೆಚ್ಚಾಗಿ 3.39 ಲಕ್ಷ ಕೋಟಿ ರೂ.ಗೆ ತಲುಪಿದೆ. ಇದರೊಂದಿಗೆ ಅವರು ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಔಷಧ ತಯಾರಿಕಾ ಸಂಸ್ಥೆ ಸೀರಂ ಇನ್ಸ್ಟಿಟ್ಯೂಟ್ನ ಸೈರಸ್ ಪೂನಾವಾಲಾ ನಾಲ್ಕನೇ ಸ್ಥಾನದಲ್ಲಿದ್ದಾರೆ.