ಬೆಂಗಳೂರು, ಸೆ.27 (DaijiworldNews/AA): ಈಗಾಗಲೇ 5 ಗ್ಯಾರಂಟಿ ಸ್ಕೀಂ ಕೊಟ್ಟಿದ್ದೀರಾ. ಅದರಂತೆ 6ನೇ ಗ್ಯಾರಂಟಿ ಹಾಲಿನ ಅಂತಾ ಪ್ರೋತ್ಸಾಹ ಧನವನ್ನು 15 ರೂ.ಗೆ ಏರಿಕೆ ಮಾಡಿ. ರೈತರಿಗೂ ತೊಂದರೆ ಆಗೋದು ಬೇಡ" ಎಂದು ಹೇಳಿದರು.

ಹಾಲು ದರ ಏರಿಕೆ ಕುರಿತು ಸರ್ಕಾರ ಕೈಗೊಂಡಿರುವ ನಿರ್ಧಾರದ ವಿಚಾರವಾಗಿ ಮಾತನಾಡಿದ ಅವರು, "ಸರ್ಕಾರ ಈಗಾಗಲೇ 5 ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಅದನ್ನೇ 15 ರೂ.ಗೆ ಏರಿಕೆ ಮಾಡಿ. ಜನರ ಮೇಲೆ ಹಾಲಿನ ದರ ಏರಿಕೆ ಬೇಡ. ನೀವು ಬಡವರು ಹಾಲು ಕೊಂಡುಕೊಳ್ಳದಂತೆ ಮಾಡುತ್ತಿದ್ದೀರಾ. ಅದರ ಬದಲು ಸರ್ಕಾರವೇ ರೈತರಿಗೆ ನೀಡುವ ಪ್ರೋತ್ಸಾಹ ಧನವನ್ನ ಏರಿಕೆ ಮಾಡಲಿ. ಜನರ ಮೇಲೆ ಹಾಲಿನ ದರ ಏರಿಕೆ ಬೇಡ" ಎಂದರು.
"ದುಡ್ಡು ಹೊಡೆಯೋದಕ್ಕೆ ನಮ್ಮ ವಿರೋಧ ಇದ್ದೇ ಇರುತ್ತೆ. ಕಾನೂನು ಬದ್ದವಾಗಿ ನಾಡನ್ನ ಉಳಿಸೋ ಕೆಲಸ ಮಾಡ್ತೀರಾ ಅಂದರೆ ಇನ್ನೂ 10 ವರ್ಷ ನೀವೆ ಅಧಿಕಾರದಲ್ಲಿರಿ. ಸಾರ್ವಜನಿಕವಾಗಿ ನಾನೇ ನಿಮಗೆ ಸನ್ಮಾನ ಮಾಡ್ತೀನಿ" ಎಂದು ತಿಳಿಸಿದರು.
"ಇಲ್ಲಿಯವರೆಗೂ ಲೂಟಿ ಮಾಡಿರೋದು ಸಾಕು. ಈಗಲಾದರೂ ಜನರ ಪರವಾಗಿ ಕೆಲಸ ಮಾಡಿ. ನಾನೇ 50,000 ಜನರನ್ನ ಸೇರಿಸಿ ಅದ್ದೂರಿಯಾಗಿ ನಿಮಗೆ ಸನ್ಮಾನ ಮಾಡ್ತೀನಿ. ಜನರ ಮೇಲೆ ಹೊರೆ ಹಾಕಬೇಡಿ. ಹಾಲಿನ ಬೆಲೆ ಏರಿಕೆ ಬದಲು ಪ್ರೊತ್ಸಾಹ ಧನ ಕೊಡಿ" ಎಂದು ವಾಗ್ದಾಳಿ ನಡೆಸಿದರು.
"ನೀವು ಕೊಡಗೈ ದಾನಿಗಳು ಗ್ಯಾರಂಟಿ ಯೋಜನೆ ಕೊಡ್ತಾ ಇದ್ದೀರಾ. ಹಾಗೆಯೇ ಇದಕ್ಕೂ ಪ್ರೊತ್ಸಾಹ ಧನ ಕೊಡಿ. ಈ ದೇಶದಲ್ಲಿ ಶ್ರೀಮಂತ ವರ್ಗ, ಬಡ ವರ್ಗ ಅಂತಾ ಇದೆ. ಬಡ ವರ್ಗಕ್ಕೆ ಹಾಲಿನ ದರ ಜಾಸ್ತಿ ಮಾಡಿ ಸಮಸ್ಯೆ ಮಾಡಬೇಡಿ" ಎಂದು ಕಿಡಿಕಾರಿದರು.