ಬೆಂಗಳೂರು, ಅ.13 (DaijiworldNews/AA): 108 ಸೇವೆ ಮೇಲೆ ಅವಲಂಬನೆ ಆಗಬೇಡಿ. ನೀವೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಎರಡು ತಿಂಗಳು ಅಂಬುಲೆನ್ಸ್ ಸೇವೆ ಸ್ಥಗಿತಗೊಳಿಸಿ ಮುಷ್ಕರ ಕೈಗೊಂಡಿರುವ ವಿಚಾರವಾಗಿ ಮಾತನಾಡಿದ ಅವರು, "108 ಅಂಬುಲೆನ್ಸ್ ಮೇಲೆ ಅವಲಂಬನೆ ಆಗಬೇಡಿ. ಎರಡು ತಿಂಗಳು ಕಾಲ ಅಂಬುಲೆನ್ಸ್ ಮೇಲಿನ ಅವಲಂಬನೆ ತಪ್ಪಿಸಿ. ನಾವು ವ್ಯವಸ್ಥೆ ಸರಿ ಮಾಡುತ್ತಿದ್ದೇವೆ. ಹೊಸ ಅಂಬುಲೆನ್ಸ್ ಖರೀದಿ ಮಾಡಿ ಸಮಸ್ಯೆ ಸರಿ ಮಾಡುತ್ತೇವೆ" ಎಂದರು.
ಅಂಬುಲೆನ್ಸ್ ಶಾರ್ಟೇಜ್ ಇದೆ. ನಾವು ಖರೀದಿ ಮಾಡುತ್ತೇವೆ. ಅಲ್ಲಿವರೆಗೆ ನೀವೆ ವ್ಯವಸ್ಥೆ ಮಾಡಿಕೊಳ್ಳಿ. ಅಂಬುಲೆನ್ಸ್ ನೌಕರರ ಬ್ಲ್ಯಾಕ್ಮೇಲ್ಗೆ ನಾನು ಬಗ್ಗಲ್ಲ. ಇವರ ದಬ್ಬಾಳಿಕೆಗೆ ನಾನು ಬಗ್ಗಲ್ಲ. ರೋಗಿಗಳಿಗೆ ತೊಂದರೆ ಆದರೆ ಕಂಪನಿಗಳೇ ಹೊಣೆ. ಮೂರು ತಿಂಗಳಿಗೊಮ್ಮೆ ಬಂದು ಮುಷ್ಕರ ಅಂದರೆ ಏನು ಅರ್ಥ? ಎಂದು ಪ್ರಶ್ನಿಸಿದರು.