ನವದೆಹಲಿ, ಅ.16 (DaijiworldNews/AA): ಅಕ್ಟೋಬರ್ 16ರಂದು ದೆಹಲಿಯ ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಸಿಜೆಪಿಯ 'ತಿರಂಗಾ' ಮೆರವಣಿಗೆ ನಡೆಯಬೇಕಿತ್ತು. ಸಿಜೆಪಿ ಮೆರವಣಿಗೆಯ ಕರೆ ನೀಡಿದ ಬೆನ್ನಲ್ಲೇ ಎನ್ಡಿಎಂಸಿ ಆಡಳಿತಾತ್ಮಕ ಕಾರಣಗಳನ್ನು ಉಲ್ಲೇಖಿಸಿ ಅಕ್ಟೋಬರ್ 16 ಮತ್ತು 17ರಂದು ಉದ್ಯಾನವನವು ಮುಚ್ಚಲಾಗುತ್ತದೆ ಎಂದು ಆದೇಶಿಸಿದೆ.

ಅಕ್ಟೋಬರ್ 16 ರಂದು ಸಂಜೆ 5 ಗಂಟೆಗೆ ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ರಾಷ್ಟ್ರಧ್ವಜದೊಂದಿಗೆ ಮೆರವಣಿಗೆಗೆ ಕಾಕ್ರೋಚ್ ಜನತಾ ಪಕ್ಷವು ಮನವಿ ಮಾಡಿದೆ ಎಂದು ಡಿಸಿಪಿ (ಪಿಆರ್ಒ) ನೇಹಾ ಯಾದವ್ ಹೇಳಿದ್ದಾರೆ. ಆಮ್ ಆದ್ಮಿ ಪಾರ್ಟಿ (ಎಎಪಿ) ಕೂಡ ಈ ಕರೆಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದ್ದು, ತನ್ನ ಬೆಂಬಲಿಗರು ಮತ್ತು ಸಾರ್ವಜನಿಕರಿಗೆ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದೆ.
ಪ್ರಸ್ತುತ ಭದ್ರತಾ ಕಾಳಜಿಗಳಿಂದಾಗಿ, ಕನ್ನಾಟ್ ಪ್ಲೇಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಆರ್ಪಿಸಿಯ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಈಗಾಗಲೇ ಜಾರಿಯಲ್ಲಿದೆ. ಆಡಳಿತಾತ್ಮಕ ಕಾರಣಗಳಿಗಾಗಿ ಸೆಂಟ್ರಲ್ ಪಾರ್ಕ್ ಅಕ್ಟೋಬರ್ 16 ಮತ್ತು 17ರಂದು ಮುಚ್ಚಲ್ಪಡುತ್ತದೆ ಎಂದು ಎನ್ಡಿಎಂಸಿ ದೆಹಲಿ ಪೊಲೀಸರಿಗೆ ತಿಳಿಸಿದೆ.