ಕೋಲ್ಕತ್ತಾ, ನ.25 (DaijiworldNews/AA): ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೈಜೋಡಿಸುವಂತೆ ತಮಗೆ ಸಲಹೆ ನೀಡಿದ್ದರು ಎಂದು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ, ಸಿಎಂ ಸುವೇಂದು ಅಧಿಕಾರಿ ತಿಳಿಸಿದ್ದಾರೆ.

ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ನನ್ನ ಮೂಲ ಸಲಹೆಗಾರರಾಗಿದ್ದವರು ಪ್ರಣಬ್ ಮುಖರ್ಜಿ. ಅವರು ರಾಷ್ಟ್ರಪತಿಯಾದ ನಂತರ ನಾನು ರೈಸಿನಾ ಹಿಲ್ಸ್ಗೆ (ರಾಷ್ಟ್ರಪತಿ ಭವನಕ್ಕೆ) ಹೋಗಿದ್ದೆ. ಪ್ರಣಬ್ ಜಿ ನನಗೆ, ನೀನು ಏನು ಮಾಡಲು ಬಯಸುತ್ತೀಯ ಎಂಬುದರ ಬಗ್ಗೆ ಯೋಚಿಸು. ನೀನು ಕೇವಲ ಒಬ್ಬ ಉದ್ಯೋಗಿಯಾಗಿ ಉಳಿಯಲು ಬಯಸಿದರೆ, ಇಲ್ಲೇ ಇರು. ಒಂದು ವೇಳೆ ನೀನು ಸ್ವತಂತ್ರವಾಗಿ ಮುಂದೆ ಸಾಗಲು ಬಯಸಿದರೆ, ಮೋದಿಜಿಯವರ ಜೊತೆ ಸೇರು" ಎಂದು ಹೇಳಿದ್ದರು.
"ಅವರದ್ದು ಒಬ್ಬ ವ್ಯಕ್ತಿಯ ಪಕ್ಷವಾಗಿತ್ತು; ಅತ್ತೆ ಮತ್ತು ಸೋದರಳಿಯನ (ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ) ಪಕ್ಷವಾಗಿತ್ತು. ಇದು ಸಂಪೂರ್ಣವಾಗಿ ಒಂದು ಕಂಪನಿಯಂತಿದ್ದು, ಅದರಲ್ಲಿ ಒಬ್ಬ ಅಧ್ಯಕ್ಷರು ಮತ್ತು ಒಬ್ಬ ವ್ಯವಸ್ಥಾಪಕ ನಿರ್ದೇಶಕರಿದ್ದರು" ಎಂದರು.
"ನಾನು ಅಲ್ಲಿಯೇ ಇದ್ದೆ, ಆದರೆ ನಾನು ಕೇವಲ ಒಬ್ಬ ಉದ್ಯೋಗಿಯಾಗಿ ಉಳಿಯಲು ಬಯಸಲಿಲ್ಲ, ಹಾಗಾಗಿ ನಾನು ಹೊರಬಂದೆ. ಅವರು ನನ್ನ ಪಾಲಕರಾಗಿದ್ದರು, ನನ್ನ ಸಲಹೆಗಾರರಾಗಿದ್ದರು. ರಾಜಕೀಯವನ್ನು ಹೊರತುಪಡಿಸಿ, ಪ್ರತಿಯೊಬ್ಬ ಭಾರತೀಯರೂ ಪ್ರಣಬ್ ಮುಖರ್ಜಿಯವರನ್ನು ಗೌರವಿಸುತ್ತಾರೆ" ಎಂದು ಅಭಿಪ್ರಾಯಪಟ್ಟರು.