ಬೆಂಗಳೂರು,ನ.25 (DaijiworldNews/AK): ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರಕ್ಕೆ ಚಿಕ್ಕಮಗಳೂರಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಮುಖ್ಯವಾಗಿ ಚಿಕ್ಕಮಗಳೂರು ಕಾಂಗ್ರೆಸ್ ಶಾಸಕರಾದ ನಯನಾ ಮೋಟಮ್ಮ, ರಾಜೇಗೌಡ, ತಮ್ಮಯ್ಯ ರಾಜೀನಾಮೆ ಮುಂದಾಗಿದ್ದು, ಈ ವೇಳೆ ಕೆಪಿಸಿಸಿ ಅಧ್ತಕ್ಷ ಬಿಕೆ ಹರಿಪ್ರಸಾದ್ ಅವರು ಮಧ್ಯೆ ಪ್ರವೇಶಿಸಿ ತಡೆದಿದ್ದಾರೆ.

ಇನ್ನೊಂದೆಡೆ ಶಾಸಕರ ನಡೆಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಕೆಂಡಾಮಂಡಲರಾಗಿದ್ದು, ಅರಣ್ಯದಲ್ಲೇ ಹುಟ್ಟಿ ಬೆಳೆದವರು ಯಾರಾದ್ರೂ ಇದ್ರೆ ಅವರಿಗೆ ಮಂತ್ರಿ ಸ್ಥಾನ ಬಿಟ್ಟು ಕೊಡುತ್ತೇನೆ. ನಾನು ಬನ್ನೆರುಘಟ್ಟ ಅರಣ್ಯ ಭಾಗದಿಂದ ಬಂದವನು. ನನಗೂ ಅರಣ್ಯದ ಬಗ್ಗೆ ಅರಿವು ಇದೆ ಎಂದು ಸ್ವಪಕ್ಷದ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಅರಣ್ಯ ಸಚಿವರಿಗೆ ಕಾಡಿನ ಬಗ್ಗೆ ಗೊತ್ತಿಲ್ಲವೆಂದು H.D.ತಮ್ಮಯ್ಯ ಹೇಳಿದ್ದಾರೆ. ನಮ್ಮದು ಆನೇಕಲ್, ಅಲ್ಲಿ ಬನ್ನೇರುಘಟ್ಟ ಅರಣ್ಯ ಪ್ರದೇಶ ಇದೆ. ಅಲ್ಲಿ ನಮ್ಮ ತೋಟ ಕೂಡ ಇದೆ, ಅಲ್ಲಿಗೆ ಕಾಡಾನೆಗಳು ಕೂಡ ಬರುತ್ತವೆ. ಅರಣ್ಯದಲ್ಲಿ ಹುಟ್ಟಿ, ಅರಣ್ಯದಲ್ಲಿ ಬೆಳೆದವರೇ ಮಂತ್ರಿಯಾದರೆ ಅಭ್ಯಂತರವಿಲ್ಲ. ನಾನು ಅರಣ್ಯ ಇಲಾಖೆ ಬಿಟ್ಟು ಕೊಡುತ್ತೇನೆ ಎಂದು ಹೇಳಿದರು.