ಲಕ್ನೋ, ಆ 14 (DaijiworldNews/PY): ಬೆಕ್ಕಿನ ಮರಿ ತರಲು ತಾಯಿ ಒಪ್ಪದ ಕಾರಣ 14 ವರ್ಷದ ಬಾಲಕನೋರ್ವ ನೇಣಿಗೆ ಶರಣಾದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ.
ಬಾಲಕ ದೆಹಲಿ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ. ಶಾಲೆಯ ಹಾಸ್ಟಲ್ನಲ್ಲಿದ್ದ ಬಾಲಕ ಕೊರೊನಾ ಕಾರಣ ಲಾಕ್ಡೌನ್ ಇದ್ದ ಕಾರಣ ಮನೆಗೆ ಬಂದಿದ್ದ. ಈ ವೇಳೆ ಮನೆಯಲ್ಲೇ ಇದ್ದ ಬಾಲಕ ತನಗೆ ಬೆಕ್ಕಿನ ಮರಿ ಬೇಕು ಎಂದು ತಾಯಿಯ ಬಳಿ ಹೇಳಿಕೊಂಡಿದ್ದಾನೆ. ಅದಕ್ಕೆ ತಾಯಿ ತಂದೆ ಬಂದ ಬಳಿಕ ಬಾಲಕ ಬೆಕ್ಕಿನ ಮರಿ ತಂದುಕೊಡುತ್ತೇನೆ ಎಂದು ಹೇಳಿದ್ದಾರೆ. ಬಾಲಕನ ತಂದೆ ಚೀನಾದಲ್ಲಿ ಉದ್ಯೋಗದಲ್ಲಿದ್ದಾರೆ.
ಆದರೆ, ಬಾಲಕ ನನಗೆ ಬೆಕ್ಕಿನ ಮರಿ ಈಗಲೇ ತಂದು ಕೊಡಿ ತಂದೆ ಬರುವ ತನಕ ಕಾಯಲು ಸಾಧ್ಯವಿಲ್ಲ ಎಂದಿದ್ದಾನೆ. ಆದರೆ, ಮಗನ ಮಾತಿಗೆ ತಾಯಿ ಪ್ರತಿಕ್ರಿಯೆ ನೀಡಲಿಲ್ಲ. ತಾಯಿ ತನ್ನ ಮಾತು ಕೇಳಲೇ ಇಲ್ಲ ಎಂದ ಬಾಲಕ ತನ್ನ ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ಇತ್ತ ತಾಯಿ ತಮ್ಮ ಕೆಲಸದಲ್ಲಿ ತೊಡಗಿದ್ದರು.
ಮರುದಿನ ಬೆಳಗ್ಗೆ ಬಾಲಕ ರೂಂ ಬಾಗಿಲು ತೆರೆಯದೇ ಇದ್ದುದು ಕಂಡು ಬಂದ ಕಾರಣ ಜಿಮ್ ಟ್ರೈನರ್ ಹಾಗೂ ಬಾಲಕ ತಾಯಿ ಬಾಗಿಲು ಒಡೆದು ಕೋಣೆಯ ಒಳಕ್ಕೆ ಹೋದ ಸಂದರ್ಭ ಬಾಲಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕುಟುಂಬಸ್ಥರು ಯಾವುದೇ ದೂರು ನೀಡಿಲ್ಲ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.