ನವದೆಹಲಿ, ಆ 14 (DaijiworldNews/PY): ಸಮಾಜದ ಎಲ್ಲ ವರ್ಗದವರಿಗೆ ಕೊರೊನಾ ಲಸಿಕೆಯ ಲಭ್ಯತೆ ಸೇರಿದಂತೆ ಕೈಗೆಟಕುವ ಬೆಲೆ ಹಾಗೂ ನ್ಯಾಯಯುತವಾಗಿ ಲಸಿಕೆಯನ್ನು ತಲುಪಿಸಲು ಯಾವ ರೀತಿಯಾದ ಕ್ರಮ ಕೈಗೊಂಡಿದೆ ಎನ್ನುವುದನ್ನು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಭಾರತವು ಕೊರೊನಾ ಲಸಿಕೆಯನ್ನು ಅಭಿವೃದ್ದಿಪಡಿಸುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಸಮಾಜದ ಎಲ್ಲ ವರ್ಗದವರಿಗೆ ಕೊರೊನಾ ಲಸಿಕೆಯ ಲಭ್ಯತೆ ಸೇರಿದಂತೆ ಕೈಗೆಟಕುವ ಬೆಲೆ ಹಾಗೂ ನ್ಯಾಯಯುತವಾಗಿ ಲಸಿಕೆಯನ್ನು ತಲುಪಿಸಲು ಯಾವ ರೀತಿಯಾದ ಕ್ರಮ ಕೈಗೊಂಡಿದೆ ಎನ್ನುವುದನ್ನು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಬೇಕು ಎಂದಿದ್ದಾರೆ.
ಪ್ರಸ್ತುತ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಕೊರೊನಾ ಲಸಿಕೆಯೊಂದಿಗೆ ಮಾನವನ ಮೇಲಿನ ಪ್ರಯೋಗಗಳನ್ನು ನಡೆಸುತ್ತಿವೆ.