ಚಾಮರಾಜನಗರ, ಆ 14 (DaijiworldNews/HR): ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿಯಲ್ಲಿ ರಾತ್ರೋರಾತ್ರಿ ನಡೆದ ಗಲಭೆಯಲ್ಲಿ ಎಸ್ ಡಿಪಿಐ ಸಂಘಟನೆ ಪಾತ್ರ ಪಾತ್ರ ವಹಿಸಿದೆ ಎಂಬುದು ಬೆಳಕಿಗೆ ಬಂದಿರುವುದರಿಂದ ಎಸ್ಡಿಪಿಐ ಸಂಘಟನೆಯನ್ನು ನಿಷೇಧಿಸಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಡಿಜೆ ಹಳ್ಳಿಯಲ್ಲಿ ನಡೆದಿರುವುದು ದೊಡ್ಡ ದುರಂತವಾಗಿದ್ದು, ಇನ್ನು ಮುಂದೆ ಇಂತಹ ಯಾವುದೇ ಘಟನೆಗಳು ನಡೆಯಬಾರದು. ಈ ದುರಂತಕ್ಕೆ ಕಾರಣಕರ್ತರಾದವನ್ನು ಆದಷ್ಟು ಬೇಗ ಹುಡುಕಬೇಕು. ಈ ಘಟನೆಯಲ್ಲಿ ಎಸ್ ಡಿಪಿಐ ಪಾತ್ರ ಇದೆ ಎಂಬ ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಎಸ್ ಡಿಪಿಐಯನ್ನು ನಿಷೇಧಿಸಬೇಕೆಂಬುದು ಎಲ್ಲರ ಬೇಡಿಕೆ ಎಂದು ಹೇಳಿದರು.
ಜನರಿಗೆ ಮುಖ್ಯವಾಗಿ ಶಾಂತಿ, ಸೌಹಾರ್ದತೆ ಬೇಕು. ಆದರೆ ಸಮಾಜ ದ್ರೋಹಿ ಸಂಘಟನೆಗಳು ಸಮಾಜದಲ್ಲಿ ಶಾಂತಿ ಇರಬಾರದು ಎಂಬ ಧ್ಯೇಯ ಹೊಂದಿವೆ. ಹಾಗಾಗಿ ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂಬುದು ನನ್ನ ಬಲವಾದ ಅಭಿಪ್ರಾಯ ಎಂದು ಹೇಳೀದರು.