ಲಕ್ನೋ, ಆ 14 (DaijiworldNews/HR): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ನಂತರ ಇದೀಗ ಸುಪ್ರಿಂಕೋರ್ಟ್ ನ ನಿರ್ದೇಶನದಂತೆ ಅಯೋಧ್ಯಾ ತೀರ್ಪಿನ ಅನ್ವಯ ಮಸೀದಿ ನಿರ್ಮಾಣ ಮಾಡಲಾಗಿದ್ದು, 5 ಎಕರೆ ಭೂಮಿ ಮೀಸಲಿಡಲಾಗಿದೆ.
ಇನ್ನು ಮಸೀದಿ ನಿರ್ಮಾಣಕ್ಕಾಗಿ ಶೇ. 60 ರಷ್ಟು ಹಿಂದೂಗಳು ಕೂಡ ಕೊಡುಗೆ ನೀಡಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆಯಲ್ಲಿ ಅನೇಕ ಸಂಖ್ಯೆಯಲ್ಲಿ ಮುಸ್ಲಿಮರು ಭಾಗಿಯಾಗಿದ್ದು, ಹಿಂದೂ-ಮುಸ್ಲಿಂ ಕೋಮು ಸಾಮರಸ್ಯಕ್ಕೆ ಸಾಕ್ಷಿಯಾಗಲಿದೆ, ಎಂದು ಐಐಸಿಎಫ್ ತಿಳಿಸಿದೆ.
ಅಯೋಧ್ಯೆ ಭೂಮಿ ಪೂಜೆ ಸಮಾರಂಭಕ್ಕೆ ಮೂರು ದಿನಗಳ ಮೊದಲು ಅಯೋಧ್ಯೆ ಜಿಲ್ಲಾಡಳಿತವು ಐಐಸಿಎಫ್ಗೆ ಭೂಮಿಯನ್ನು ಹಸ್ತಾಂತರಿಸಿತು. ಇನ್ನು ಸುಪ್ರೀಂ ಕೋರ್ಟ್ ಆದೇಶ ಪಾಲಿಸಿದ ಉತ್ತರ ಪ್ರದೇಶದ ಸರ್ಕಾರ 2020 ರ ಫೆಬ್ರವರಿಯಲ್ಲಿ ಧನ್ನಿಪುರ ಗ್ರಾಮದಲ್ಲಿ ಯುಪಿಎಸ್ಸಿಡಬ್ಲ್ಯೂಬಿಗೆ 5ಎಕರೆ ಭೂಮಿ ಹಂಚಿಕೆ ಮಾಡಿದೆ.
ಐಐಸಿಎಫ್ ಈಗಾಗಲೇ ಲಕ್ನೋದಲ್ಲಿ ಕಚೇರಿಯನ್ನು ತೆರೆದುಕೊಂಡು, ದೇಣಿಗೆ ಸ್ವೀಕರಿಸಲು ಟ್ರಸ್ಟ್ ಮುಂದಿನ ವಾರದೊಳಗೆ ಪೋರ್ಟಲ್ ಪ್ರಾರಂಭಿಸುವ ಪ್ರಕ್ರಿಯೆಯಲ್ಲಿದೆ.