ನವದೆಹಲಿ, ಆ 14 (DaijiworldNews/PY): ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದ ಸಂದರ್ಭ ನೀಡಲಾಗುವ ರಾಷ್ಟ್ರಪತಿ ಪದಕ ಹಾಗೂ ಶ್ರೇಷ್ಠ ಸೇವೆ ಸಲ್ಲಿಸಿರುವಂತ ಪೊಲೀಸರಿಗೆ ನೀಡಲಾಗುವ ಪೊಲೀಸ್ ಪದಕಕ್ಕಾಗಿ ಮಂಗಳೂರಿನ ಸಬ್ ಇನ್ಸ್ಪೆಕ್ಟರ್ ಕೆ.ಜಯಪ್ರಕಾಶ್ ಸೇರಿ ರಾಜ್ಯದಿಂದ 19 ಮಂದಿ ಆಯ್ಕೆ ಪೊಲೀಸ್ ಸಿಬ್ಬಂದಿಗಳನ್ನು ಶುಕ್ರವಾರ ಆಯ್ಕೆ ಮಾಡಲಾಗಿದೆ.
ಸಿಆರ್ಪಿಎಫ್ನ 118 ಪೊಲೀಸ್ ಸಿಬ್ಬಂದಿಗಳು, ಉತ್ತರ ಪ್ರದೇಶದ 102 ಪೊಲೀಸರು ಹಾಗೂ ಜಮ್ಮು- ಕಾಶ್ಮೀರದ 94 ಪೊಲೀಸರು ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸಹಾಯಕ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಬೆಂಗಳೂರು ಸಿಐಡಿ ಪ್ರಸನ್ನ ಕುಮಾರ್ ಲಕ್ಷ್ಮೀನರಸಿಂಹ ಅವರು ವಿಶೇಷ ಸೇವೆಗಾಗಿ ರಾಷ್ಟ್ರಪತಿ ಪದಕವನ್ನು ಪಡೆದರೆ, ಉತ್ತಮ ಸೇವೆ ಸಲ್ಲಿಸಿದ ರಾಜ್ಯದ 18 ಪೊಲೀಸ್ ಅಧಿಕಾರಿಗಳು ಪದಕಗಳನ್ನು ಗಳಿಸಿದ್ದಾರೆ.
ಕರ್ನಾಟಕದಿಂದ ಉತ್ತಮ ಸೇವೆಗಾಗಿ ಪೊಲೀಸ್ ಪದಕಕ್ಕೆ ಆಯ್ಕೆಯಾದ ಪೊಲೀಸ್ ಸಿಬ್ಬಂದಿಗಳಲ್ಲಿ, ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೇಮಂತ್ ಕುಮಾರ್ ರಂಗಪ್ಪ (ಎಸ್ಐಟಿ, ಲೋಕಾಯುಕ್ತ), ಪರಮೇಶ್ವರ ಹೆಗ್ಡೆ (ಎಕಾನಾಮಿಕ್ ಆಫೀಸರ್ ಡಿವಿಸನ್, ಸಿಐಡಿ), ಮಂಜುನಾಥ್ ರಾಜಣ್ಣ (ಎಸಿಬಿ, ಮಂಡ್ಯ), ಶೈಲೇಂದ್ರ ಮುತ್ತಣ್ಣ ಹರಗ ( ಡಿಎಸ್ಪಿ, ಸೋಮವಾರಪೇಟೆ ಸಬ್ ಡಿವಿಸನ್, ಸೋಮವಾರಪೇಟೆ ಕೊಡಗು) , ರಮೇಶ್ ಕುಮಾರ್ ಬೈರಪ್ಪ ಹಿರಿಯೂರು (ರಾಜ್ಯ ಗುಪ್ತಚರ ದಳ, ತುಮಕೂರು), ಉಮೇಶ್ ಪಣಿತಡ್ಕ (ಪೊಲೀಸ್ ತರಬೇತಿ ಶಾಲೆ, ಮೈಸೂರು) ಮತ್ತು ಸಹಾಯಕ ಪೊಲೀಸ್ ಆಯುಕ್ತ ಸತೀಶ್ ಮಹಲಿಂಗಯ್ಯ ಹೊನ್ನೆಹಳ್ಳಿ (ಸಂಚಾರ, ಬೆಂಗಳೂರು).
ದಿವಾಕರ ಚನ್ನಪಟ್ಟಣ ನರಸಿಂಹ ಜೆಟ್ಟಪ್ಪ (ಪೊಲೀಸ್ ಇನ್ಸ್ಪೆಕ್ಟರ್, ಮಡಿಕೇರಿ ಗ್ರಾಮಾಂತರ), ಲಕ್ಷ್ಮಿ ನಾರಾಯಣ ಅನಂತರಾಮನ್ ಬೀಚನಹಳ್ಳಿ (ಪೊಲೀಸ್ ಸಬ್ ಇನ್ಸ್ಪೆಕ್ಟರ್, ಸಿಟಿ ಸ್ಪೆಷಲ್ ಬ್ರಾಂಚ್, ಬೆಂಗಳೂರು), ಮಹಾಬಲೇಶ್ವರ ಚಾಂದೇಕರ್ ಹೇಮ (ವಿಶೇಷ ಮೀಸಲು ಪೊಲೀಸ್, ಕೆಎಸ್ಆರ್ಪಿ, ಬೆಂಗಳೂರು), ಕೆ ಜಯಪ್ರಕಾಶ್, (ಪೊಲೀಸ್ ಸಬ್ ಇನ್ ಸ್ಪೆಕ್ಟರ್, ಮಂಗಳೂರು ಸಿಟಿ ಕಂಟ್ರೋಲ್ ರೂಂ) ಹನುಮಂತಪ್ಪ ನಂಜುಡಯ್ಯ (ಡಿಸಿಆರ್ಬಿ, ಚಿಕ್ಕಬಳ್ಳಾಪುರ), ಕೆ ಅತಿಕ್ಯೂ ಯು.ಆರ್.ರೆಹಮಾನ್ (ಎಎಸ್ಐ, ಫಿಂಗರ್ ಪ್ರಿಂಟ್ ವಿಭಾಗ, ಶಿವಮೊಗ್ಗ), ರಾಮಾಂಜನಯ್ಯ (ಎಎಸ್ಐ, ಕೆ.ಬಿ.ಕ್ರಾಸ್ ಪೊಲೀಸ್ ಠಾಣೆ, ತುಮಕೂರು) ಮತ್ತು ರುದ್ರಪ್ಪ ನಾಗಪ್ಪ ಬಲಿಕೈ (ಎಎಸ್ಐ, ಸಿಪಿಐ ಆಫೀಸ್, ರಾಣಿ ಬೆನ್ನೂರು ಗ್ರಾಮಾಂತರ ವಿಭಾಗ, ಹಾವೇರಿ) ಮತ್ತು ಸಿವಿಲ್ ಹೆಡ್ ಕಾನ್ಸ್ಟೆಬಲ್ ಹೊನಪ್ಪ ಕರಿಯಪ್ಪ (ಎಸ್ಪಿ ಆಫೀಸ್, ಬೆಂಗಳೂರು) ಆಯ್ಕೆಯಾಗಿದ್ದಾರೆ.