ನವದೆಹಲಿ, ಆ 15 (DaijiworldNews/PY): ಪ್ರತಿಯೋರ್ವ ಭಾರತೀಯನಿಗೂ ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಮೂಲಕ ಆರೋಗ್ಯ ಗುರುತಿನ ಚೀಟಿ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
74ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಪ್ರಮುಖವಾದ ಬದಲಾವಣೆ ತರುವ ಉದ್ದೇಶದಿಂದ ಪ್ರತಿಯೋರ್ವ ಭಾರತೀಯನಿಗೂ ಆರೋಗ್ಯ ಗುರುತಿನ ಚೀಟಿ ಹಾಗೂ ಸಂಖ್ಯೆಯನ್ನು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ದೇಶದ ಪ್ರತಿಯೋರ್ವ ಭಾರತೀಯನೂ ಪ್ರತ್ಯೇಕವಾದ ಹೆಲ್ತ್ ಕಾರ್ಡ್ ಪಡೆದುಕೊಳ್ಳದ್ದಾರೆ ಎಂದು ತಿಳಿಸಿದ್ದಾರೆ.
ಪ್ರತಿಯೊಬ್ಬರಿಗೂ ಡಿಜಿಟಲ್ ವ್ಯವಸ್ಥೆಯ ಮೂಲಕ ಉನ್ನತ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವುದು ಪ್ರಮುಖ ಉದ್ದೇಶವಾಗಿದ್ದು, ಈ ಯೋಜನೆಯು ಹಲವಾರು ಆರೋಗ್ಯ ಸೇವೆಗಳನ್ನು ಒಳಗೊಂಡಿದೆ. ಅಲ್ಲದೇ, ಎಲ್ಲಾ ರೀತಿಯಾದ ಆರೋಗ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ. ಇದರೊಂದಿಗೆ ಭದ್ರತೆ ಸೇರಿದಂತೆ ಖಾಸಗಿ ಮಾಹಿತಿಗಳ ಗೌಪತ್ಯೆನ್ನು ಸುರಕ್ಷಿಸಲಾಗುತ್ತದೆ.
ಈ ಆರೋಗ್ಯ ಕಾರ್ಡ್ನಲ್ಲಿ ನಮ್ಮ ಎಲ್ಲಾ ಆರೋಗ್ಯ ಮಾಹಿತಿಯು ಡಿಜಿಟಲ್ ಮಾದರಿಯಲ್ಲಿರುತ್ತದೆ. ದೇಶಾಂದ್ಯಂತ ಇರುವ ವೈದ್ಯರು ಹಾಗೂ ಆರೋಗ್ಯ ಸೌಲಭ್ಯಕ್ಕೆ ಈ ದಾಖಲೆಯು ಲಿಂಕ್ ಆಗಿರುತ್ತದೆ.