ನವದೆಹಲಿ, ಫೆ.20 (DaijiworldNews/PY): ಅರುಣಾಚಲ ಪ್ರದೇಶ ಹಾಗೂ ಮಿಜೋರಾಂ ರಾಜ್ಯಗಳ ರಚನಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಶುಭಾಶಯ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಮಿಜೋರಾಂನ ನನ್ನ ಸಹೋದರ ಹಾಗೂ ಸಹೋದರಿಯರಿಗೆ ಮಿಜೋರಾಂ ರಾಜ್ಯ ದಿನದ ಶುಭಾಶಯಗಳು. ಇಡೀ ರಾಷ್ಟ್ರ ಮಿಜೋರಾಂ ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುತ್ತದೆ. ಮಿಜೋರಾಂನ ಜನರು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ದಯೆ ಹಾಗೂ ಬದ್ದತೆಗೆ ಹೆಸರುವಾಸಿಯಾಗಿದ್ದಾರೆ" ಎಂದಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, "ಅರುಣಾಚಲ ಪ್ರದೇಶದ ಜನರಿಗೆ ರಾಜ್ಯ ರಚನಾ ದಿನದ ಶುಭಾಶಯಗಳು. ಈ ರಾಜ್ಯದ ಜನರು ತಮ್ಮ ಸಂಸ್ಕೃತಿ, ಧೈರ್ಯ ಹಾಗೂ ಭಾರತದ ಅಭಿವೃದ್ದಿಯ ಮೇಲಿನ ಬದ್ದತೆಗೆ ಹೆಸರುವಾಸಿಯಾಗಿದ್ದಾರೆ. ಅರುಣಾಚಲ ಪ್ರದೇಶ ಪ್ರಗತಿಯ ಹೊಸ ಶಿಖರವನ್ನೇರಲಿ" ಎಂದು ತಿಳಿಸಿದ್ದಾರೆ.
ಅರುಣಾಚಲ ಪ್ರದೇಶ ಹಾಗೂ ಮಿಜೋರಾಂಗೆ 1987ರ ಫೆ.21ರಂದು ರಾಜ್ಯದ ಸ್ಥಾನಮಾನ ದೊರೆಯಿತು.