ಶ್ರೀನಗರ, ಫೆ.20 (DaijiworldNews/PY): ಜಮ್ಮು-ಕಾಶ್ಮೀರದ ಬಂಡಿಪಿರ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ ಉಗ್ರರ ಇಬ್ಬರು ಸಹಚರರನ್ನು ಭದ್ರತಾ ಪಡೆಗಳು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಬಂಧಿತರನ್ನು ಬಂಡಿಪೊರದ ನಿವಾಸಿ ಅಬಿದ್ ವಾಝಾ ಹಾಗೂ ಬಶೀರ್ ಅಹಮದ್ ಗೊಜೆರ್ ಎಂದು ಗುರುತಿಸಲಾಗಿದೆ.
"ಬಂಧಿತರಿಂದ ಅಪರಾಧ ಕೃತ್ಯಕ್ಕೆ ಉಪಯೋಗಿಸುವಂತೆ ಕೆಲ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ" ಶನಿವಾರ ಪೊಲೀಸರು ಹೇಳಿದ್ದಾರೆ.
"ಉಗ್ರರು ಇರುವ ಬಗ್ಗೆ ಮಾಹಿತಿ ತಿಳಿದ ಭದ್ರತಾ ಪಡೆ ಶುಕ್ರವಾರದಂದು ಪಾಪಚನ್-ಬಂಡಿಪೊರ ಸೇತುವೆಯ ಸಮೀಪ ಚೆಕ್ಪಾಯಿಂಟ್ ಅನ್ನು ಸ್ಥಾಪಿಸಿದ್ದರು. ಈ ಸಂದರ್ಭ ಉಗ್ರರ ಇಬ್ಬರು ಸಹಚರರು ಸಿಕ್ಕಿ ಬಿದ್ದಿದ್ದಾರೆ" ಎಂದು ತಿಳಿಸಿದ್ದಾರೆ.
"ಬಂಧಿತ ಉಗ್ರರ ಇಬ್ಬರು ಸಹಚರರು ಆ ಪ್ರದೇಶದಲ್ಲಿ ಸಕ್ರಿಯರಾಗಿರುವ ಉಗ್ರರಿಗೆ ಆಶ್ರಯ ಸೇರಿದಂತೆ ಅವರ ಕಾರ್ಯಾಚರಣೆಗಳಿಗೆ ಬೇಕಾದ ಅಗತ್ಯವಾದ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದರು" ಎಂದಿದ್ದಾರೆ.
"ಬಂಡಿಪೊರದಲ್ಲಿನ ಭದ್ರತಾ ಪಡೆಯ ಮೇಲೆ ಗ್ರೆನೇಡ್ ದಾಳಿ ನಡೆಸಲು ಇಬ್ಬರು ಸಹಚರರಿಗೆ ಉಗ್ರರು ಸೂಚನೆ ನೀಡಿದ್ದರು" ಎಂದು ತಿಳಿಸಿದ್ದಾರೆ.