ಗೋಪೇಶ್ವರ, ಫೆ.21 (DaijiworldNews/PY): ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತದಿಂದ ಉಂಟಾದ ಅವಘಡಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆ 15ನೇ ದಿನವೂ ಕೂಡಾ ಮುಂದುವರೆದಿದ್ದು, ಎರಡು ಶವಗಳನ್ನು ಹೊರತೆಗೆಯಲಾಗಿದೆ.

"ಫೆ.20 ಶನಿವಾರ ಸಂಜೆ 3 ಶವಗಳು ಪತ್ತೆಯಾಗಿತ್ತು, ರಾತ್ರಿ ವೇಳೆಗೆ ಇನ್ನೂ ಎರಡು ಶವಗಳು ಪತ್ತೆಯಾಗಿದ್ದು, ಈ ಮೂಲಕ ಸಾವನ್ನಪ್ಪಿದವರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ. 137 ಮಂದಿ ಕಣ್ಮರೆಯಾಗಿದ್ದಾರೆ" ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಚಮೋಲಿ ಜಿಲ್ಲೆಯ ರಿಷಿ ಗಂಗಾದ ಬಳಿ ಫೆ.7ರಂದು ನಿರ್ಗಲ್ಲು ಕುಸಿತ ಸಂಭವಿಸಿತ್ತು. ಈ ಹಿನ್ನೆಲೆ ಸುಮಾರು 13.2 ಮೆಗಾವಾಟ್ ಸಾಮರ್ಥ್ಯದ ರಿಷಿ ಗಂಗಾ ಜಲವಿದ್ಯುತ್ ಯೋಜನೆ ಸಂಪೂರ್ಣ ನಾಶಗೊಂಡಿದ್ದು, ತಪೋವನ-ವಿಷ್ಣುಗಡ್ ಯೋಜನೆಯೂ ಹಾನಿಗೊಂಡಿದೆ.