ರಾಮನಗರ, ಫೆ.21 (DaijiworldNews/PY): "ಐಎಂಎ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ" ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ರವಿವಾರ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನ್ನ ಅಧಿಕಾರದ ಅವಧಿಯಲ್ಲಿ ಐಎಂಎ ಹಗರಣ ಹೊರ ಬಂದಿತ್ತು. ಈ ಹಗರಣದ ತನಿಖೆ ನಡೆಸುವಂತೆ ನಾನು ಸಿಬಿಐಗೆ ಆದೇಶಿಸಿದ್ದೆ. ಆ ಸಂದರ್ಭ ಆತ ದೇಶ ಬಿಟ್ಟು ದುಬೈಗೆ ಪರಾರಿಯಾಗಿದ್ದ. ಹಗರಣ ಆರೋಪಿಯನ್ನು ನಮ್ಮ ಅಧಿಕಾರಿಗಳು ಬಂಧಿಸಿ ಕರೆತಂದಿದ್ದರು. ವಿಚಾರಣೆ ಸಂದರ್ಭ ಕುಮಾರಸ್ವಾಮಿ ಅವರಿಗ ಎಂದು ಹಣ ಸಂಗ್ರಹಣೆ ಮಾಡಿದ್ದರಂತೆ. ಕುಮಾರಸ್ವಾಮಿಗೆ ಆ ಹಣ ಸೇರಿಲ್ಲಾ ಎನ್ನುವ ಚರ್ಚೆ ನಡೆಯುತ್ತದೆ. ಯಾರ ಮೇಲೆ ಬೇಕಾದರೂ ಕ್ರಮ ತೆಗೆದುಕೊಳ್ಳಲಿ. ಈ ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರವಿಲ್ಲ" ಎಂದರು
"ರೋಷನ್ ಬೇಗ್ ಅವರು ಒಂದೊಮ್ಮೆ ಸಂಜೆ ವೇಳೆಗೆ ಕೃಷ್ಣ ಕಚೇರಿಯಲ್ಲಿದ್ದ ಸಂದರ್ಭ ಇಪ್ತೀಯರ್ ಕೂಟ ಇದೆ ಎಂದು ಒತ್ತಾಯಿಸಿದ್ದರು. ನಾನು ಕೃಷ್ಣ ಕಚೇರಿಯಿಂದ ಅಲ್ಲಿಗೆ ಹೋಗಿದ್ದೆ. ಆ ವೇಳೆ ಅಲ್ಲಿದ್ದ ಇಬ್ಬರು ವ್ಯಕ್ತಿಗಳು ರೋಷನ್ ಬೇಗ್ ಅವರು ಮಹಾನ್ ದಾನಿಗಳಿ ಶಿಕ್ಷನ ಸಂಸ್ಥೆಗಳಿಗೆ ಇವರೇ ದಾನ ಮಾಡುತ್ತಾರೆ ಎಂದು ಹೇಳುತ್ತಿದ್ದರು. ಅಲ್ಲಿಯವರೆಗೆ ಅವರು ಯಾರೆಂದು ತಿಳಿದಿರಲಿಲ್ಲ. ತನಿಖೆಗೆ ನಾನೇ ಆದೇಶಿಸಿದ ಮೇಲೆ ನನ್ನ ಪಾತ್ರ ಎಲ್ಲಿದೆ" ಎಂದು ಪ್ರಶ್ನಿಸಿದರು.
ಒಕ್ಕಲಿಗರಿಗ ಮೀಸಲಾತಿ ಬೇಕು ಎನ್ನುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಮೀಸಲಾತಿ ಹೋರಾಟ ಬಂದಾಗ ಮಾತನಾಡೋಣ. ಈ ರೀತಿಯಾದ ವಿಷಯಗಳ ಮೂಲಕ ರಾಜಕೀಯ ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಒಂದು ವರ್ಗ ಮಾತ್ರ ರಾಜಕೀಯವಾಗಿ ಸ್ಥಾನಮಾನ ಪಡೆಯಲು ಹೊರಟಿದೆ. ಈ ರೀತಿಯಾದ ಹೋರಾಟದಲ್ಲಿ ಪಾಲ್ಗೊಳ್ಳುವವನು ನಾನಲ್ಲ" ಎಂದರು.