ನವದೆಹಲಿ, ಮಾ.04 (DaijiworldNews/PY): "ಭಾರತದಲ್ಲಿ ಕಳೆದ ವರ್ಷ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲ್ಪಟ್ಟ ಸಂಖ್ಯೆಯು ವಿಶ್ವದಲ್ಲೇ ಅಧಿಕವಾಗಿತ್ತು" ಎಂದು ಅಕ್ಸೆಸ್ ನೌ ಎನ್ನುವ ಡಿಜಿಟಲ್ ಹಕ್ಕುಗಳು ಹಾಗೂ ಗೌಪ್ಯತೆಗೆ ಸಂಬಂಧಿಸಿದ ಸಂಸ್ಥೆ ಬಿಡುಗಡೆಗೊಳಿಸಿದೆ ಎಂದು ತನ್ನ ವರದಿಯಲ್ಲಿ ವಿವರಿಸಿದೆ.

ಸಾಂದರ್ಭಿಕ ಚಿತ್ರ
"2020ರಲ್ಲಿ ಒಟ್ಟು 109 ಬಾರಿ ವಿವಿಧ ತಾಣಗಳಲ್ಲಿ ದೇಶದಲ್ಲಿ ಇಂಟರ್ನೆಟ್ ಸ್ಥಗಿತವಾಗಿತ್ತು" ಎಂದು ವರದಿ ತಿಳಿಸಿದೆ.
"ಜಾಗತಿಕವಾಗಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವ ದೇಶಗಳಲ್ಲಿ ನಂಬರ್ 1 ಸ್ಥಾನದಲ್ಲಿ ಭಾರತ ಇದೆ. ಯೆಮೆನ್ ಎರಡನೇ ಸ್ಥಾನದಲ್ಲಿದ್ದು, ಒಟ್ಟು ಆರು ಬಾರಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಇಥಿಯೊಪಿಯಾ ಮೂರನೇ ಸ್ಥಾನದಲ್ಲಿದ್ದು, ನಾಲ್ಕು ಬಾರಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ" ಎಂದು ಹೇಳಿದೆ.
"ಜಮ್ಮು-ಕಾಶ್ಮೀರ ಮಾತ್ರವಲ್ಲದೇ, ಲಾಕ್ಡೌನ್ ಅವಧಿಯಲ್ಲಿ ಸರ್ಕಾರ ದೇಶದ ವಿವಿಧ ಭಾಗಗಲ್ಲಿ ನಾನಾ ಕಾರಣಕ್ಕೆ ಇಂಟರ್ನೆಟ್ ಸ್ಥಗಿತಗೊಳಿಸಿತ್ತು. ಇದರೊಂದಿಗೆ ಮುಂಜಾಗ್ರತಾ ಕ್ರಮವಾಗಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು ಎಂದು ಸರ್ಕಾರ ತಿಳಿಸಿದೆಯಾದರೂ, ರಾಜಕೀಯ ಕಾರಣಕ್ಕಾಗಿ ಅಧಿಕ ಸಂದರ್ಭಗಳಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿತ್ತು" ಎಂದು ವರದಿ ವಿವರಿಸಿದೆ.