ಕೋಟಾ, ಮಾ.09 (DaijiworldNews/HR): ರಾಜಸ್ಥಾನದ ಜಾಲಾವರ್ನಲ್ಲಿ 15 ವರ್ಷದ ಬಾಲಕಿಯನ್ನು ಎಂಟು ದಿನಗಳಲ್ಲಿ ಒಂಬತ್ತು ಮಂದಿ ಪ್ರತ್ಯೇಕ ಸ್ಥಳಗಳಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಂಧರ್ಭಿಕ ಚಿತ್ರ
ಆರೋಪಿಗಳಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರವರಾಗಿದ್ದು, ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯು ಅವರಿಂದ ತಪ್ಪಿಸಿಕೊಂಡು ಶುಕ್ರವಾರ ತನ್ನ ಮನೆಗೆ ತಲುಲಿಸ್ಸು, ಬಳಿಕ ಪೊಲೀಸರಿಗೆ ದೂರು ನೀಡಲಾಯಿತು.
ಫೆಬ್ರವರಿ 25 ರಂದು ತನ್ನ ಸ್ನೇಹಿತ ಮತ್ತು ಇನ್ನೊಬ್ಬ ಯುವಕ ನನಗೆ ಸ್ಕೂಲ್ ಬ್ಯಾಗ್ ತೆಗೆದುಕೊಡುವ ನೆಪದಲ್ಲಿ ಜಾಲಾವರ್ ಸಿಟಿಗೆ ಕರೆದೊಯ್ದಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ ಎಂದು ಡಿಎಸ್ಪಿ ಮಂಜೀತ್ ಸಿಂಗ್ ಹೇಳಿದ್ದಾರೆ.
ಉದ್ಯಾನವನದಲ್ಲಿ ಇಬ್ಬರು ಬಾಲಕರೊಂದಿಗೆ ಮೂರು ಜನರು ಸೇರಿಕೊಂಡರು ಅಲ್ಲಿ ಅವರು ಮಾದಕ ದ್ರವ್ಯ ಸೇವಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ.
ಇನ್ನು "ಬಾಲಕಿಯ ವೈದ್ಯಕೀಯ ಪರೀಕ್ಷೆಯನ್ನು ಕೂಡಲೇ ನಡೆಸಲಾಗಿದ್ದು, ನಾಲ್ವರು ಆರೋಪಿಗಳನ್ನು ಕೂಡ ಪರೀಕ್ಷೆ ನಡೆಸಲಾಗಿದ್ದು, ಉಳಿದವರನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ" ಎಂದು ಡಿಎಸ್ಪಿ ತಿಳಿಸಿದ್ದಾರೆ.