ಬೆಂಗಳೂರು, ಮಾ.12 (DaijiworldNews/HR): ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಣೆಗೆ ಸಹಾಯ ಮಾಡಿದ ಆರೋಪದಲ್ಲಿ ಇಬ್ಬರು ಏರ್ ಇಂಡಿಯಾ ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಸಾಂಧರ್ಭಿಕ ಚಿತ್ರ
ಇಬ್ಬರು ಪ್ರಯಾಣಿಕರಿಂದ ಪೇಸ್ಟ್ ರೂಪದಲ್ಲಿದ್ದ ಚಿನ್ನವನ್ನು ತೆಗೆದುಕೊಳ್ಳುತ್ತಿದ್ದ ಸಂದರ್ಭ ಮಹಿಳಾ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದ ಇಬ್ಬರು ಸದಸ್ಯರಿಗೆ ಈ ಚಿನ್ನವನ್ನು ಹಸ್ತಾಂತರಿಸಲಿದ್ದರು ಎನ್ನಲಾಗಿದೆ.
ಇನ್ನು ದುಬೈನಿಂದ ಬಂದ ಎಮಿರೇಟ್ಸ್ ವಿಮಾನ ಇಕೆ 564 ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದು, ಇಬ್ಬರು ಪ್ರಯಾಣಿಕರು ಒಂದು ಕೆ.ಜಿ. ಚಿನ್ನದ ಪೇಸ್ಟ್ ಅನ್ನು ತಂದಿದ್ದರು. ಟರ್ಮಿನಲ್ ಒಳಗೆ ಮಹಿಳಾ ಸಿಬ್ಬಂದಿಗೆ ಅದನ್ನು ಒಪ್ಪಿಸಿದ್ದರು ಎಂದು ತಿಳಿದುಬಂದಿದೆ.
ಈ ಗ್ಯಾಂಗ್ನಲ್ಲಿ ಏರ್ ಇಂಡಿಯಾ ಹಳೆಯ ಸಿಬ್ಬಂದಿ ಕೂಡ ಇರುವುದನ್ನು ವಿಚಾರಣೆ ವೇಳೆ ಇವರು ಒಪ್ಪಿಕೊಂಡಿದ್ದು, ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.