ನವದೆಹಲಿ, ಮಾ.19 (DaijiworldNews/PY): "ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ 2021ರ ದೆಹಲಿ ಸರ್ಕಾರ ರಾಷ್ಟ್ರೀಯ ರಾಜಧಾನಿ ವಲಯ (ತಿದ್ದುಪಡಿ)ಯು ಭಾರತದ ಒಕ್ಕೂಟದ ಮೇಲೆ ಮಾಡಿರುವ ಸರ್ಜಿಕಲ್ ಸ್ಟ್ರೈಕ್" ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಈ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿರುವ ದೀದಿ, "ಕೇಂದ್ರ ಸರ್ಕಾರದ ಈ ನಡೆಯು ಭಾರತದ ಒಕ್ಕೂಟದ ಮೇಲಾಗಿರುವ ಸರ್ಜಿಕಲ್ ಸ್ಟ್ರೈಕ್" ಎಂದು ಆರೋಪಿಸಿದ್ದಾರೆ.
"ಎಎಪಿ ಪಕ್ಷದಿಂದ ಬಿಜೆಪಿಗೆ ವಿಧಾನಸಭಾ ಚುನಾವಣೆಯಲ್ಲಾದ ಸೋಲನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಇದರ ಮೂಲಕ ದೆಹಲಿಯನ್ನು ಆಳಲು ಸಜ್ಜಾಗುತ್ತಿದೆ" ಎಂದಿದ್ದಾರೆ.
ಮಮತಾ ಪತ್ರಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್, "ದೆಹಲಿಯ ಜನರಿಗೆ ಬೆಂಬಲ ನೀಡಿರುವುದಕ್ಕೆ ಧನ್ಯವಾದಗಳು' ಎಂದು ತಿಳಿಸಿದ್ದಾರೆ.
ಮಾರ್ಚ್ 15ರಂದು ಕೇಂದ್ರ ಬಿಜೆಪಿ ಸರ್ಕಾರ 2021 ದೆಹಲಿ ಸರಕಾರ ರಾಷ್ಟ್ರೀಯ ರಾಜಧಾನಿ ವಲಯ (ತಿದ್ದುಪಡಿ) ವಿಧೇಯಕವನ್ನು ಮಂಡಿಸಿತ್ತು.