ನವದೆಹಲಿ, ಮಾ.19 (DaijiworldNews/HR): ಸರ್ಕಾರದ ದೂರದೃಷ್ಟಿ ಕೊರತೆ ಮತ್ತು ಅಸಮರ್ಪಕ ಲಾಕ್ಡೌನ್ನಿಂದಾಗಿ ಲಕ್ಷಾಂತರ ಕುಟುಂಬಗಳು ಇಂದಿಗೂ ಸಮಸ್ಯೆಯಲ್ಲಿ ಸಿಲುಕಿಕೊಂಡಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, "ಕೊರೊನಾದಿಂದಾಗಿ ಕಳೆದ 2020 ಮಾರ್ಚ್ 24 ರಂದು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸಿದ್ದು, ಸರ್ಕಾರದ ಯೋಜಿತವಲ್ಲದ ಲಾಕ್ ಡೌನ್ ನಿಂದಾಗಿ ವಲಸಿಗರು ಸೇರಿದಂತೆ ಹಲವು ಮಂದಿ ಸಮಸ್ಯೊಗೊಳಾಗಿದ್ದಾರೆ" ಎಂದರು.
ಇನ್ನು "ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಯೋಜಿತವಲ್ಲದ ಲಾಕ್ಡೌನ್ ದುರಂತ ಇನ್ನೂ ಕಾಡುತ್ತಿದೆ" ಎಂದು ಹೇಳಿದ್ದಾರೆ.