ಬೆಂಗಳೂರು, ಮಾ. 20(DaijiworldNews/HR): ರಷ್ಯಾದ ಕೊರೊನಾ ಲಸಿಕೆ ಸ್ಪುಟ್ನಿಕ್ ವಿ ಅನ್ನು ಬೆಂಗಳೂರಿನಲ್ಲಿರುವ ಸ್ಟ್ರೈಡ್ಸ್ ಫಾರ್ಮಾ ಸೈನ್ಸ್ನ ಅಂಗ ಸಂಸ್ಥೆ ಸ್ಟೆಲಿಸ್ ಬಯೋಫಾರ್ಮಾ ತಯಾರಿಸಲಿದೆ ಎಂದು ತಿಳಿದು ಬಂದಿದೆ.

ಸಾಂಧರ್ಭಿಕ ಚಿತ್ರ
ರಷ್ಯಾದ ಸ್ಪುಟ್ನಿಕ್ ಕೊರೊನಾ ಲಸಿಕೆಯು ಅನೇಕ ತಿಂಗಳ ಹಿಂದೆಯೇ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಕೋರಿತ್ತು. ಆದರೆ ಇದುವರೆಗೂ ಅದಕ್ಕೆ ಅನುಮತಿ ನೀಡಿಲ್ಲ. ಈ ನಡುವೆ ಸ್ಟೆಲಿಸ್ ಬಯೋಫಾರ್ಮಾ ಕನಿಷ್ಠ 200 ಮಿಲಿಯನ್ ಡೋಸ್ ಲಸಿಕೆಗಳ ಉತ್ಪಾದನೆ ಹಾಗೂ ಪೂರೈಕೆಯ ಕಾರ್ಯನಡೆಸುತ್ತಿದೆ ಎನ್ನಲಾಗಿದೆ.
ಭಾರತದಲ್ಲಿ ವರ್ಷಕ್ಕೆ ಸುಮಾರು 550 ಮಿಲಿಯನ್ ಡೋಸ್ ಸ್ಪುಟ್ನಿಕ್ ಲಸಿಕೆಯನ್ನು ಉತ್ಪಾದಿಸುವಷ್ಟು ಸಾಮರ್ಥ್ಯವನ್ನು ಹೆಚ್ಚಿಸಿದ್ದು, ರಷ್ಯಾದ ನೇರ ಹೂಡಿಕೆ ನಿಧಿಯೊಂದಿಗೆ (ಆರ್ಡಿಐಎಫ್) ಸ್ಟೆಲಿಸ್ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ.
ಸ್ಟೆಲಿಸ್, ಸ್ಪುಟ್ನಿಕ್ ಲಸಿಕೆಗಾಗಿ ಆರ್ಡಿಐಎಫ್ ಜತೆ ಒಪ್ಪಂದ ಮಾಡಿಕೊಂಡ ಭಾರತದ ನಾಲ್ಕನೆಯ ಕಂಪೆನಿ ಎನ್ನಲಾಗಿದೆ.