ನವದೆಹಲಿ, ಮಾ 20(DaijiworldNews/MS): ಸರಕಾರಿ ಸಹಾಯ ಅಥವಾ ಸಬ್ಸಿಡಿ ಇಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ 10ರೂ.ಗಳಿಗೆ ಒಂದು ಎಲ್.ಇ.ಡಿ. ಬಲ್ಬ್ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಶಕ್ತಿ ಹಾಗೂ ನವೀನ ಮತ್ತು ಪುನರುಜ್ಜೀವನಗೊಳಿಸಬಹುದಾದ ಶಕ್ತಿ ಖಾತೆಯ ಕುಮಾರ್ ಸಿಂಗ್ ಶುಕ್ರವಾರ ಚಾಲನೆ ನೀಡಿದ್ದಾರೆ.

"ಗ್ರಾಮ ಉಜಾಲಾ" ವು ಇಂಧನ ದಕ್ಷತೆಯನ್ನು ಹೆಚ್ಚಿಸುವ ಮೂಲಕ ಹವಾಮಾನ ಬದಲಾವಣೆಯ ವಿರುದ್ಧದ ನಮ್ಮ ಹೋರಾಟಕ್ಕೆ ಉತ್ತೇಜನ ನೀಡುವುದಲ್ಲದೆ, ಉತ್ತಮ ಜೀವನಮಟ್ಟ, ಆರ್ಥಿಕ ಉಳಿತಾಯ ಮತ್ತು ಗ್ರಾಮೀಣ ಪ್ರದೇಶದ ನಾಗರಿಕರಿಗೆ ಉತ್ತಮ ಸುರಕ್ಷತೆಯನ್ನು ನೀಡುತ್ತದೆ" ಎಂದು ಅವರು ಹೇಳಿದ್ದಾರೆ.
ಇಇಎಸ್ಎಲ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸೌರಭ್ ಕುಮಾರ್ ಮಾತನಾಡಿ, ಉಜಾಲಾ ಕಾರ್ಯಕ್ರಮವು ಪ್ರತಿ ಹಳ್ಳಿಯನ್ನು ತಲುಪಲು ಸಾಧ್ಯವಿಲ್ಲ ಏಕೆಂದರೆ ಗ್ರಾಮೀಣ ಗ್ರಾಹಕರು ಎಲ್ಇಡಿ ಬಲ್ಬ್ ಗೆ 70 ರೂ. ಖರೀದಲು ಸಾಧ್ಯವಿಲ್ಲ. ಆದರೆ ಅದೇ ಗ್ರಾಮ್ ಉಜಾಲಾ ಯೋಜನೆಯೊಂದಿಗೆ, ಉತ್ತಮ ಗುಣಮಟ್ಟದ ಎಲ್ಇಡಿ ಬಲ್ಬ್ ಅನ್ನು ಪ್ರತಿ ಬಲ್ಬ್ ಒಂದಕ್ಕೆ 10 ರೂಗಳಿಗೆ ನೀಡುತ್ತೇವೆ ಹೀಗಾಗಿ ಗ್ರಾಮ ಗ್ರಾಮಕ್ಕೆ ತಲುಪಲು ಸಾಧ್ಯವಾಗಲಿದೆ" ಎಂದು ಅವರು ಹೇಳಿದ್ದಾರೆ.
ಸರಕಾರಿ ಸ್ವಾಮ್ಯದ ಎನರ್ಜಿ ಎಫೀಶಿಯೆನ್ಸಿ ಸರ್ವೀಸಸ್ ಲಿ. ನ ಅಂಗಸಂಸ್ಥೆ ಕನ್ವರ್ಜೇನ್ಸ್ ಎನರ್ಜಿ ಸರ್ವೀಸಸ್ ಲಿ. ಜಗತ್ತಿನಲ್ಲೇ ಅತೀ ಕಡಿಮೆ ಬೆಲೆಯಲ್ಲಿ ಈ ಎಲ್ ಇಡಿ ಬಲ್ಬ್ ಒದಗಿಸಲಿದೆ. ಈ ಯೋಜನೆ ಗ್ರಾಮ ಉಜಾಲಾಕ್ಕೆ ಶಕ್ತಿ ತುಂಬಲಿದೆ.