ಗಾಜಿಯಾಬಾದ್, ಮಾ.20 (DaijiworldNews/PY): ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ಶತಾಬ್ದಿ ಎಕ್ಸ್ಪ್ರೆಸ್ ರೈಲಿನ ಜನರೇಟರ್ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಮಾಹಿತಿಗಳ ಪ್ರಕಾರ, ರೈಲು ನವದೆಹಲಿ ರೈಲ್ವೆ ನಿಲ್ದಾಣದಿಂದ ಲಕ್ನೋ ಕಡೆಗೆ ತೆರಳುತ್ತಿತ್ತು ಎನ್ನಲಾಗಿದೆ.
ಗಾಜಿಯಾಬಾದ್ ರೈಲ್ವೆ ನಿಲ್ದಾಣದಲ್ಲಿ 2 ನಿಮಿಷಗಖ ಕಾಲ ನಿಲ್ಲಿಸಿದ ರೈಲು ಬಳಿಕ ಪ್ರಯಾಣ ಪುನರಾರಂಭಿಸಿತು. ಈ ಸಂದರ್ಭ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಆ ಬೋಗಿಯನ್ನು ಪ್ರತ್ಯೇಕಿಸಲಾಗಿದೆ.
"ಜನರೇಟರ್ ಹಾಗೂ ರೈಲಿನ ಲಗೇಜ್ ಇರುವ ಶತಾಬ್ದಿ ಎಕ್ಸ್ಪ್ರೆಸ್ನ ಕೊನೆಯ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಆ ಬೋಗಿಯನ್ನು ಪ್ರತ್ಯೆಕಿಸಲಾಗಿದ್ದು, ಬೆಂಕಿ ನಂದಿಸುವ ಕಾರ್ಯ ಮಾಡಲಾಗಿದೆ. ಬೋಗಿಯ ಬಾಗಿಲುಗಳು ಜಾಮ್ ಆದ್ದರಿಂದ ಬಾಗಿಲು ಒಡೆದು ಬೆಂಕಿ ನಂದಿಸಲಾಗಿದೆ" ಎಂದು ವರದಿ ಹೇಳಿದೆ.
ಘಟನೆಯಲ್ಲಿ ಯಾವುದೇ ಸಾವು-ನೋವು ಆಗಿಲ್ಲ. ಘಟನೆಗೆ ಕಾರಣ ಏನು ಎಂದು ಇನ್ನಷ್ಟೇ ತಿಳಿದುಬರಬೇಕಿದೆ.
ಕಳೆದ ಶನಿವಾರ ಡೆಹ್ರಾಡೂನ್-ದೆಹಲಿ ಶತಾಬ್ದಿ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.