ಶ್ರೀನಗರ,ಮಾ. 20(DaijiworldNews/HR): ಶ್ರೀನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾತ್ರಿ ವೇಳೆಯ ವಿಮಾನ ಹಾರಾಟ ಯಶಸ್ವಿಯಾಗಿದೆ ಎಂದು ವಿಮಾನಯಾನ ಸಂಸ್ಥೆ ಶನಿವಾರ ತಿಳಿಸಿದೆ ಎಂದು ತಿಳಿದು ಬಂದಿದೆ.

ಸಾಂಧರ್ಭಿಕ ಚಿತ್ರ
ಶ್ರೀನಗರದ ಶೇಖ್ ಆಲಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಗೋಏರ್ ವಿಮಾನ ದೆಹಲಿಗೆ ಯಶಸ್ವಿಯಾಗಿ ಹಾರಾಟ ನಡೆಸಿದ್ದು, ಇದು ರಾತ್ರಿ ವೇಳೆಯ ಮೊದಲ ವಿಮಾನ ಹಾರಾಟ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ 7.15 ಕ್ಕೆ ಶ್ರೀನಗರದಿಂದ ನವದೆಹಲಿಗೆ ತೆರಳಿತು. ಈ ವೇಳೆ ಕೈಗಾರಿಕೆ ಮತ್ತು ವಾಣಿಜ್ಯ ಪ್ರಧಾನ ಕಾರ್ಯದರ್ಶಿ ರಂಜನ್ ಪ್ರಕಾಶ್ ಠಾಕೂರ್ ವಿಮಾನದ ಸಿಬ್ಬಂದಿಗೆ ಶುಭ ಕೋರಿದರು ಎನ್ನಲಾಗಿದೆ.