ನವದೆಹಲಿ, ಮಾ. 20(DaijiworldNews/HR) : "ದೇಶದಲ್ಲಿ ನಿರುದ್ಯೋಗ, ಬಡತನ ಹೆಚ್ಚಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಇನ್ನೊಂದೆಡೆ ಕೇಂದ್ರ ಸರ್ಕಾರದ ಆಪ್ತರ ಆದಾಯವೂ ಹೆಚ್ಚಾಗಿದೆ" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, "ಕೇಂದ್ರ ಸರ್ಕಾರ ಏನು ಹೆಚ್ಚಳ ಮಾಡಿದೆ? ನಿರುದ್ಯೋಗ, ಹಣದುಬ್ಬರ ಮತ್ತು ಬಡತನ ಹೆಚ್ಚು ಮಾಡಿದೆ. ತನ್ನ ಆಪ್ತರ ಗಳಿಕೆಯನ್ನು ಹೆಚ್ಚಿಸಿದೆ" ಎಂದರು.
ಇನ್ನು "ಕೊರೊನಾ ಬಿಕ್ಕಟ್ಟು ಆರಂಭಕ್ಕೂ ಮುನ್ನ ದೇಶದಲ್ಲಿ ಮಧ್ಯಮ ವರ್ಗದ ಜನಸಂಖ್ಯೆ 9.9 ಕೋಟಿ ಇತ್ತು. ಕೊರೊನಾ ಪಿಡುಗು ಕಾಣಿಸಿಕೊಂಡ ನಂತರ ಅವರ ಸಂಖ್ಯೆ 6.6 ಕೋಟಿಗೆ ಇಳಿದಿದೆ" ಎಂದು ಹೇಳಿದ್ದಾರೆ.