ನವದೆಹಲಿ,ಮಾ. 20(DaijiworldNews/HR) : ಕೊರೊನಾ ಲಸಿಕೆ 8-10 ತಿಂಗಳವರೆಗೆ ಸೋಂಕಿನ ವಿರುದ್ಧ ಉತ್ತಮ ರಕ್ಷಣೆ ನೀಡಲಿದೆ" ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ.

ರಣದೀಪ್ ಗುಲೇರಿಯಾ
ಈ ಕುರಿತು ಮಾತನಾಡಿದ ಅವರು, "ಕೊರೊನಾ ಲಸಿಕೆ ಎಂಟು ರಿಂದ ಹತ್ತು ತಿಂಗಳಿಗಿಂತ ಹೆಚ್ಚು ಕಾಲ ಸೋಂಕಿನಿಂದ ರಕ್ಷಣೆ ನೀಡುವ ಸಾಧ್ಯತೆಯೂ ಇದೆ" ಎಂದರು.
ಇನ್ನು "ಜನರು ಕೊರೊನಾ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಕೊರೊನಾ ಸಂಪೂರ್ಣ ನಿರ್ಮೂಲನೆಯಾಗಿದೆ ಎಂದು ಜನರು ಭಾವಿಸಿರುವುದೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಪ್ರಮುಖ ಕಾರಣ" ಎಂದಿದ್ದಾರೆ.