ಇಡುಕ್ಕಿ, ಮಾ.20 (DaijiworldNews/MB) : ಹಿರಿಯ ಸಿಪಿಐ ಮುಖಂಡ, ಟ್ರೇಡ್ ಯೂನಿಯನ್ ಸದಸ್ಯ ಮತ್ತು ಕೇರಳದ ವಿಧಾನಸಭೆಯ ಮಾಜಿ ಡೆಪ್ಯುಟಿ ಸ್ಪೀಕರ್ ಆಗಿದ್ದ ಸಿ.ಎ. ಕುರಿಯನ್ (88) ಅವರು ಶನಿವಾರ ನಿಧನರಾದರು.

ವಯೋಸಹಜವಾದ ಅನಾರೋಗ್ಯದಿಂದ ಮುನ್ನಾರ್ನ ತಮ್ಮ ನಿವಾಸದಲ್ಲಿ ನಿಧನರಾದರು.
ಕೋಟಯಂ ಜಿಲ್ಲೆಯ ಪುದುಪಳ್ಳಿಯವರಾದ ಕುರಿಯನ್ ಅವರು, ತಮ್ಮ ಬ್ಯಾಂಕ್ ಉದ್ಯೋಗವನ್ನು ತ್ಯಜಿಸಿ1960 ರಲ್ಲಿ ಟ್ರೇಡ್ ಯೂನಿಯನ್ ಕಾರ್ಯಕರ್ತರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಕೃಷಿ ಕಾರ್ಮಿಕರ ಹೋರಾಟದಲ್ಲಿ, ಹಲವು ತಿಂಗಳು ಜೈಲುವಾಸ ಅನುಭವಿಸಿದ್ದರು.
ಕುರಿಯನ್ ಅವರು ಎಐಟಿಯುಸಿ ಸಂಘಟನೆಯ ಹಿರಿಯ ಮುಖಂಡರಾಗಿದ್ದರು. ಪೀರ್ಮೇಡ್ ಕ್ಷೇತ್ರದಿಂದ 1977, 1980 ಮತ್ತು 1996ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದರು.